ವಿಜಯನಗರ (ಹೊಸಪೇಟೆ): ಪಾಗಲ್ ಪ್ರೇಮಿಯೋರ್ವ ಯುವತಿಯ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಯುವತಿಯ ತಲೆಯೊಂದಿಗೆ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾದ ಘಟನೆ ಕಾನಾಹೊಸಹಳ್ಳಿ ಕನ್ನಬೋರಯ್ಯನಹಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ನಿರ್ಮಲಾ (23) ಕೊಲೆಯಾದ ಯುವತಿ, ಭೋಜರಾಜ ಎಂಬಾತ ಕೊಲೆ ಮಾಡಿದ ವ್ಯಕ್ತಿ.
ನಿರ್ಮಲಾ ಹಾಗೂ ಭೋಜರಾಜ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಬೋಜರಾಜ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.
ಯುವತಿ ಬಿಎಸ್ಸಿ ನರ್ಸಿಂಗ್ ಕೊನೆಯ ವರ್ಷದ ಓದುತ್ತಿದ್ದು, ವಿಶ್ರಾಂತಿಗೆಂದು ಸ್ವ ಗ್ರಾಮಕ್ಕೆ ಕಳೆದ ಮೂರು ದಿನಗಳ ಹಿಂದೆಯಷ್ಟೇ ಆಗಮಿಸಿದ್ದಳು. ಭೋಜರಾಜ ಏಕ ಏಕಿ ಯುವತಿಯ ಮನೆಗೆ ನುಗ್ಗಿ ಮಚ್ಚಿನಿಂದ ತಲೆ ಕಡಿದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಯುವತಿಯ ರುಂಡ ಹಿಡಿದು ಠಾಣೆಗೆ ಶರಣಾದ
ಯುವತಿಯ ತಲೆಯನ್ನು ಮಚ್ಚಿನಿಂದ ಕಡಿದು ಬೈಕ್ ನಲ್ಲಿ ಕಾನಾಹೊಸಹಳ್ಳಿ ಠಾಣೆಗೆ ರುಂಡ ತಂದು ಪೊಲೀಸರಿಗೆ ಶರಣಾಗಿದ್ದು, ಪ್ರಸ್ತುತ ಈ ಕೊಲೆಯಿಂದಾಗಿ ಗ್ರಾಮದ ಜನ ಆತಂಕದಲ್ಲಿದ್ದಾರೆ.
Laxmi News 24×7