Breaking News

ಇಂದು ಡಾ| ಹೆಗ್ಗಡೆ ಪ್ರಮಾಣ ವಚನ:

Spread the love

ಬೆಳ್ತಂಗಡಿ: ನಾಡಿನ ಪುಣ್ಯದ ನೆಲೆವೀಡಾಗಿ ಚತುರ್ದಾನ ಪರಂಪರೆಯೊಂದಿಗೆ ಸಮಾಜಮುಖೀ ಯೋಜನೆಗಳಿಂದ ಐತಿಹಾಸಿಕ ಗೌರವ ಗಳಿಗೆ ಸಾಕ್ಷಿಯಾ ಗಿರುವ ಧರ್ಮಸ್ಥಳ ಕ್ಷೇತ್ರವಿಂದು ಮಗದೊಂದು ಇತಿಹಾಸ
ಬರೆಯುತ್ತಿದೆ. ಕ್ಷೇತ್ರದ ಧರ್ಮಾಧಿ ಕಾರಿಯವರಾದ ಡಾ| ಡಿ.

ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಗೆ ಪ್ರವೇಶಿಸುವ ಮೂಲಕ ರಾಜಧರ್ಮ ಪರಿಪಾಲನೆಯ ಮತ್ತೊಂದು ಅಧ್ಯಾಯ ಬರೆಯಲಿದ್ದಾರೆ.

ಜನಸಾಮಾನ್ಯರ ಏಳಿಗೆಗಾಗಿ ಹಲವು ಸೇವೆಗಳನ್ನು ಸಲ್ಲಿಸಿರುವ ಧರ್ಮಾಧಿಕಾರಿಗಳ ಅಗ್ರಮಾನ್ಯ ಸೇವೆ ಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕ್ಷಣದಿಂದ ನಾಡಿನಾದ್ಯಂತ ಅಭಿನಂದನೆಯ ಮಹಾಪೂರವೆ ಹರಿದುಬಂದಿತ್ತು. ಇದೀಗ ಮತ್ತೊಂದು ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತಕೋಟಿ ಸಜ್ಜಾಗಿದೆ.

ಜು. 21 (ಇಂದು) ದಿಲ್ಲಿಯ ಸಂಸತ್‌ ಭವನದಲ್ಲಿ ಬೆಳಗ್ಗೆ 10.30ಕ್ಕೆ ಡಾ| ಡಿ. ಹೆಗ್ಗಡೆಯವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿರುವರು. ಡಾ| ಹೆಗ್ಗಡೆಯವರು ಬುಧವಾರ ಸಂಜೆ 8.30ಕ್ಕೆ ದಿಲ್ಲಿ ವಿಮಾನ ನಿಲ್ದಾಣ ತಲುಪಿದ್ದಾರೆ. ಬಳಿಕ ತನ್ನ ಆಪ್ತ ಸ್ನೇಹಿತರೋರ್ವರ ನಿವಾಸ (ವಸಂತ್‌ ವಿಹಾರ್‌)ದಲ್ಲಿ ತಂಗಿದ್ದಾರೆ.

ಪ್ರಮಾಣವಚನ ಸಂದರ್ಭದಲ್ಲಿ ಡಾ| ಹೆಗ್ಗಡೆ ಕುಟುಂಬ ವರ್ಗದಿಂದ ಸಹೋದರ ಡಿ. ಸುರೇಂದ್ರ ಕುಮಾರ್‌, ಶ್ರೇಯಸ್‌ ಕುಮಾರ್‌, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್‌ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಧರ್ಮಸ್ಥಳ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್‌. ಜನಾರ್ದನ, ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಜತೆಗಿರುವರು.

ದಿಲ್ಲಿಯಲ್ಲಿ ಸ್ವಾಗತ: ದಿಲ್ಲಿ ತಲುಪಿದ ಹೆಗ್ಗಡೆ ಅವರನ್ನು ಶಾಸಕ ಹರೀಶ್‌ ಪೂಂಜ ಸ್ವಾಗತಿಸಿದರು.

ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ
ಎಂಟು ಶತಮಾನಗಳಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಆರಾಧಿಸುತ್ತಾ ಬಂದಿರುವ ಪೆರ್ಗಡೆ ಕುಟುಂಬದ ಸಂಪ್ರದಾಯಗಳನ್ನು ಉಳಿಸಿಕೊಂಡು ಆಡಳಿತದಲ್ಲಿ ಆಧುನಿಕತೆಯನ್ನು ತಂದಿರುವ ಧರ್ಮಾಧಿಕಾರಿಗಳನ್ನು ಈ ನಾಡಿನ ಅಷ್ಟ ದಿಕ್ಕುಗಳಲ್ಲೂ ಸಾಕ್ಷಾತ್‌ ನಡೆದಾಡುವ ಮಂಜುನಾಥನೆಂದೇ ಆರಾಧಿಸುತ್ತಾ ಬಂದಿದ್ದಾರೆ. ರಾಜ್ಯಸಭೆಗೆ ಪ್ರವೇಶಿಸುವ ಕ್ಷಣದಿಂದ ಆಯುಷ್ಯಪೂರ್ಣ ದೇಶಸೇವೆಗೆ ಸಮಯ ಮೀಸಲಿ ರಿಸುವೆ ಎಂದು ಅವರು ಈಗಾಗಲೇ ನುಡಿದಿದ್ದಾರೆ. ಹಾಗಾಗಿ ಪ್ರಮಾಣವಚನಕ್ಕೂ ಮುನ್ನಾದಿನ ಬುಧವಾರ ಮುಂಜಾನೆ ತಾನು ಆರಾಧಿಸುವ ಮಂಜುನಾಥ ಸ್ವಾಮಿಗೆ ಶಿರಬಾಗಿ ನಮಿಸಿ ಪ್ರಾರ್ಥನೆ ಸಲ್ಲಿಸಿ ಸ್ವಾಮಿಯ ಆಶೀರ್ವಾದ ಪಡೆದು ಬಳಿಕ ದಿಲ್ಲಿಗೆ ತೆರಳಿದ್ದರು.

ಜು. 21ರಂದು 10 – ಸಂಸತ್‌ ಪ್ರವೇಶ
10.30ರಿಂದ 11 – ಪ್ರಮಾಣವಚನ
11.20ಕ್ಕೆ ಪ್ರಧಾನಿ ಮೋದಿ ಭೇಟಿ


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ