ವಿಧಾನಸೌಧದ ಮುಂದೆ ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ವಿಧಾನಸೌಧದ ಬಳಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಸಿ.ಟಿ. ರವಿ ಬರ್ತ್ ಡೇ ಫ್ಲೆಕ್ಸ್ ಹರಿದ ಬಿಂದು ಗೌಡಸಿ.ಟಿ ರವಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಿ ವಿಧಾನಸೌಧ ಮುಂಭಾಗದಲ್ಲಿ ಪ್ಲೆಕ್ಸ್ ಅಳವಡಿಸಲಾಗಿತ್ತು. ಅನಧಿಕೃತ ಬ್ಯಾನರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಬಿಂದು ಗೌಡ ಬ್ಯಾನರ್ ಹರಿದು ಹಾಕಿದ್ದಾರೆ. ಅನಧಿಕೃತ ಬ್ಯಾನರ್ ಅಳವಡಿಸದಂತೆ ಹೈಕೋರ್ಟ್ ಸ್ಪಷ್ಟವಾದ ಆದೇಶ ಹೊರಡಿಸಿದ್ದು, ಹೈ ಕೋರ್ಟ್ ಮುಂಭಾಗದಲ್ಲೇ ಪ್ಲೆಕ್ಸ್ ಹಾಕಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಬ್ಯಾನರ್ ಹರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಅಂದ ಕೆಡುತ್ತದೆ ಎಂದು ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಕೆ ನಿರ್ಬಂಧಿಸಿ ವರ್ಷದ ಹಿಂದೆಯೇ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಜಾರಿಯಲ್ಲಿರುವ ಸಂದರ್ಭದಲ್ಲಿ ಹೈಕೋರ್ಟ್ ಮುಂಭಾಗವೇ ಬ್ಯಾನರ್ ಅಳವಡಿಸಿರುವುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು. ಇದೀಗ ಕಾಂಗ್ರೆಸ್ ನಾಯಕಿ ಬಿಂದು ಗೌಡ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಭಟನಾ ರೂಪವಾಗಿ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ.
Laxmi News 24×7