Breaking News

ಬಿಜೆಪಿ ಆಂತರಿಕ ಸಮೀಕ್ಷೆ ವರದಿ: ಬೆಳಗಾವಿಯ ಹಲವು ಶಾಸಕರಿಗೆ ವಿಧಾನಸಭೆ ಚುನಾವಣೆಯಿಂದ ಗೇಟ್ ಪಾಸ್

Spread the love

ಬೆಳಗಾವಿ: ಹದಿನೆಂಟು ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ಬಿಜೆಪಿಯ ಶಾಸಕರು ಮತ್ತು ಪ್ರಭಾವಿ ನಾಯಕರುಗಳಿದ್ದು, ಇವರಲ್ಲಿ ಕೆಲವರಿಗೆ 2023ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ.

ಹಲವು ಪ್ರಭಾವಿಗಳು ಮುಂಬರುವ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯೆತೆಯಿದೆ ಎಂದು ಆಂತರಿಕ ಸಮೀಕ್ಷೆ ವರದಿ ಮಾಡಿದೆ.

ಬೆಳಗಾವಿಯ 14 ಸ್ಥಾನಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಮುಂದೆಯು ಕೂಡ ಈ ಸ್ಥಾನಗಳನ್ನು ಉಳಿಸಿಕೊಂಡು ಹೋಗಲು ಬಿಜೆಪಿ ಬಯಸಿದೆ. ಒಂದು ವೇಳೆ ನಾಯಕರಿಗೆ ಟಿಕೆಟ್ ನಿರಾಕರಿಸಿದರೇ ಪಕ್ಷದಲ್ಲಿ ಬಂಡಾಯಕ್ಕೆ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ.

ಅನಿಲ್ ಬೆನಕೆ ಪ್ರತಿನಿಧಿಸುವ ಬೆಳಗಾವಿ ಉತ್ತರ, ಮಹದೇವಪ್ಪ ಯಾದವಾಡ ಪ್ರತಿನಿಧಿಸುವ ರಾಮದುರ್ಗ, ಮಹಾಂತೇಶ ದೊಡ್ಡಗೌಡರ್ ಪ್ರತಿನಿಧಿಸುವ ಕಿತ್ತೂರು ಕ್ಷೇತ್ರಗಳತ್ತ ಪಕ್ಷ ಗಂಭೀರವಾಗಿ ಗಮನ ಕೇಂದ್ರೀಕರಿಸಿದೆ.

ಈ ಮೂವರೂ ಚುನಾವಣೆಯಲ್ಲಿ ಸೋಲನುಭವಿಸಬಹುದೆಂಬ ಆತಂಕ ಬಿಜೆಪಿ ನಾಯಕರಿಗೆ ಎದುರಾಗಿದೆ ಪರಿಸ್ಥಿತಿ ಸರಿಪಡಿಸಲು ಈಗಾಗಲೇ ಪರ್ಯಾಯಗಳ ಕೆಲಸ ಆರಂಭಿಸಿದೆ. ಒಂದು ವೇಳೆ ಅವಶ್ಯಕತೆ ಬಂದರೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಕಮಲ ನಾಯಕರು ಹಿಂಜರಿಯುವುದಿಲ್ಲ, ಆದರೆ ಈ ಮೂರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲು ಕಾರಣವಾಗುವ ಅಂಶಗಳ ಬಗ್ಗೆ ನಾಯಕತ್ವವು ಇನ್ನೂ ಅಧ್ಯಯನ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ವೃತ್ತಿಯಲ್ಲಿ ವಕೀಲರಾಗಿರುವ ಅನಿಲ್ ಬೆನಕೆ ಬೆಳಗಾವಿಯಲ್ಲಿ ಜನಪ್ರಿಯರಾಗಿದ್ದಾರೆ, ಆದರೆ ಕಳೆದ ಲೋಕಸಭೆ ಮತ್ತು ಇತ್ತೀಚಿನ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಡಿಮೆ ಮತಗಳಿಕೆಯ ಬಗ್ಗೆ ಪಕ್ಷವು ಚಿಂತಿಸಿದೆ. ಪಕ್ಷದ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನಾಯಕರನ್ನು ಚಿಂತೆಗೀಡುಮಾಡಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಬಾರಿ ಶಾಸಕರಾಗಿರುವ ಮಹದೇವಪ್ಪ ಯಡವಾಡ ಅವರಿಗೆ 70 ವರ್ಷ ವಯಸ್ಸಾಗಿದ್ದು, ತಮ್ಮ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಸಾಕಷ್ಟು ಗಂಭೀರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೊ ಪಕ್ಷದ ಕಾರ್ಯಕರ್ತರಿಗೂ ಅವರ ಬಗ್ಗೆ ಸಂತಸವಿಲ್ಲ ಮತ್ತು ಅವರು ನಿರೀಕ್ಷಿಸಿದಷ್ಟು ಕ್ರಿಯಾಶೀಲರಾಗಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಶಾಸಕ ಮಹಾಂತೇಶ್ ದೊಡ್ಡಗೌಡರ ಬಗ್ಗೆಯೂ ಅಸಮಾಧಾನವಿದ್ದು. ಅವರು ಸಂಘ ಪರಿವಾರ ಅಥವಾ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಹೊಸ ಮುಖಗಳು ಚುನಾವಣಾ ಭವಿಷ್ಯವನ್ನು ಹೆಚ್ಚಿಸಬಹುದು ಎಂದು ಪಕ್ಷದ ನಾಯಕತ್ವ ಭಾವಿಸಿದರೆ ಬೆಳಗಾವಿಯ ಇತರ ಕೆಲವು ಬಿಜೆಪಿ ಶಾಸಕರನ್ನು ಸಹ ನಿರ್ಲಕ್ಷಿಸಬಹುದು ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ