Breaking News

ಬೆಳಗಾವಿ ಪ್ರಾದೇಶಿಕ ಆಯುಕ್ತರ ವರ್ಗಾವಣೆ ಹಿಂದಿದೆಯಾ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮಾಲಿಕರ ಕೈವಾಡ..?

Spread the love

ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ ಆದಿತ್ಯ ಬಿಸ್ವಾಸ್‌ ಅವರನ್ನು ಸರಕಾರ ಇಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಈ ಆದೇಶ ಮಂಗಳವಾರ ಹೊರಬೀಳುತ್ತಿದ್ದಂತೆ ಇದರ ಹಿಂದೆ ಬೆಳಗಾವಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯವರ ಕೈವಾಡ ಇರಬಹುದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಯಾಕಂದರೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬೆಳಗಾವಿ ಬಿಮ್ಸ್ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ಬಿಮ್ಸ್ ಆಸ್ಪತ್ರೆಯ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿಯಾಗಿ ಚಾರ್ಚ ತೆಗೆದುಕೊಂಡ ನಂತರ
ಇಡೀ ದೇಶದಲ್ಲಿರುವ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12 ನೇ ಸ್ಥಾನ ಪಡೆದುಕೊಂಡಿದೆ.ಅದರಲ್ಲೂ ಮೂಲಭೂತ ಸೌಕರ್ಯದಲ್ಲಿ ಐದನೇ ಸ್ಥಾನಕ್ಕೇರಿದೆ.

ಹಾಗೂ ಅಕ್ಯಾಡೆಮಿಕ್ ವಾಗಿ 9 ನೇ ಸ್ಥಾನದಲ್ಲಿದೆ.ಇದಕ್ಕೆಲ್ಲ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ ಆದಿತ್ಯ ಬಿಸ್ವಾಸ್ ಅವರ ಇಚ್ಛಾಶಕ್ತಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ತಂದಿರುವ ಸುದಾರಣೆ ಕಾರಣವಾಗಿತ್ತು.ಇಷ್ಟೆಲ್ಲ ಕೆಲಸಗಳನ್ನು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ ಪ್ರಾದೇಶಿಕ ಆಯುಕ್ತರನ್ನು ಸರ್ಕಾರ ವರ್ಗಾವಣೆ ಮಾಡುವ ಅವಶ್ಯಕತೆ ಇರಲಿಲ್ಲ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಮಾತುಗಳು ಬೆಳಗಾವಿಯಲ್ಲಿ ಕೇಳಿಬರುತ್ತಿದೆ.

ಕಳೆದ ವಾರದಲ್ಲಿ ಬಿಮ್ಸ್ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಸಹ ಆದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದರು.ಆಸ್ಪತ್ರೆಯ ಆವರಣದಲ್ಲಿ ಸಹಾಯ ವಾಣಿ, ಅನ್ ಲೈನ್ ಪಾವತಿ ಕೌಂಟರ್, ಹೆಲ್ತ ಡೆಸ್ಕ್, ಹಿರಿಯ ನಾಗರಿಕರ ಮತ್ತು ವಿಶೇಷಚೇತನರಿಗೆ ಪ್ರತ್ಯೇಕ ಕೌಂಟರ್, ಬಿಮ್ಸ್ ಸಿಬ್ಬಂದಿಗಳ ಮಕ್ಕಳಿಗೆ ಶಿಶು ವಿಹಾರ,ಹಾಗೂ ಮಕ್ಕಳ ವಾರ್ಡ್ ನವೀಕರಣಕ್ಕೆ ಆಮ್ಲನ್ ಆದಿತ್ಯ ಬಿಸ್ವಾಸ್ ಅವರ ಕೊಡುಗೆ ಪ್ರಮುಖವಾಗಿತ್ತು.

9-11- 2019 ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ಚಾರ್ಚ್ ತೆಗೆದುಕೊಂಡ ನಂತರ ಮಹಾಮಾರಿ ಕೋವಿಡ್ ನಿರ್ವಹಣೆಗಾಗಿ ಸರ್ಕಾರ ಅವರನ್ನು ಜೂನ್‌ 6 2021 ರಂದು ಬಿಮ್ಸ್ ಆಸ್ಪತ್ರೆಯ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿಯಾಗಿ ನೇಮಕ ಮಾಡಿತ್ತು.

ಅಂದಿನಿಂದಲೂ ಬಿಮ್ಸ್ ನಲ್ಲಿ ಒಂದಿಲೊಂದು ಸುಧಾರಣೆ ತರಲು ಆಯುಕ್ತರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು.ಅವರ ನಿರಂತರ ಪ್ರಯತ್ನದಿಂದ ಬಿಮ್ಸ್ ಆಸ್ಪತ್ರೆ ಸುಧಾರಣೆ ಕಾಣತೊಡಗಿತು.ಮನುಷ್ಯನಿಗೆ ಇಚ್ಛಾಶಕ್ತಿ ಇದ್ರೆ ಎಲ್ಲವೂ ಸಾಧ್ಯ ಎಂದು ಪ್ರಾದೇಶಿಕ ಆಯುಕ್ತರು ಬಿಮ್ಸ್ ಸಿಬ್ಬಂದಿಗಳಿಗೆ ಯಾವಾಗ್ಲೂ ಹೇಳುತ್ತಿದ್ದರು.ಅಷ್ಟೆಅಲ್ಲದೆ ಬರವು ವರ್ಷಗಳಲ್ಲಿ ಬಿಮ್ಸ್ ಆಸ್ಪತ್ರೆಯನ್ನು ಇಡೀ ದೇಶದಲ್ಲಿಯೇ 5 ನೇ ಸ್ಥಾನಕ್ಕೆ ತರಲು ಎಲ್ಲರೂ ಕೂಡಿ ಶ್ರಮವಹಿಸೊಣ ಅಂತ ಹೇಳಿದ್ದರು.ಇನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಐದಾರು ತಿಂಗಳಲ್ಲಿ ಜನರ‌ ಸೇವೆ ಪ್ರಾರಂಭಿಸಲಿದೆ.

ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯ ಕಾಮಗಾರಿ ಶೀಘ್ರದಲ್ಲೇ ಆರಂಭ ಆಗಲಿದೆ. ಜೊತೆಗೆ ನರ್ಸಿಂಗ್ ಟ್ರೈನಿಂಗ್ ಸೆಂಟರ್ ಕೂಡ ಆರಂಭ ಆಗಲಿದೆ‌‌ ಆದ್ದರಿಂದ ನಾವೆಲ್ಲ ಬಡ ರೋಗಿಗಳ ಕಾಳಜಿ ವಹಿಸಿಕೊಂಡು ನಮ್ಮ ಕರ್ತವ್ಯ ಅಚ್ಚುಕಟ್ಟಾಗಿ ನಿಭಾಯಿಸೊಣ ಎಂದು ಸರ್ಕಾರಿ ನೌಕಕರಿಗೆ ಇರುವ ಬದ್ದತೆ ಹಾಗೂ ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದರು.ಈಗ ಇಂತಹ ಒಳ್ಳೆಯ ಅಧಿಕಾರಿಯನ್ನ ಸರ್ಕಾರ ವರ್ಗಾವಣೆ ಮಾಡಿದ್ದಾದರೂ ಏಕೆ ಎನ್ನುವ ಪ್ರಶ್ನೆ ಬೆಳಗಾವಿಯಲ್ಲಿ ಎದ್ದಿದೆ

.ಇದರ ಹಿಂದೆ ಪ್ರಭಾವಿ ನಾಯಕರೊಬ್ಬರ ಹೆಸರು ಕೇಳಿಬರುತ್ತಿದೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಪ್ರಭಾವಿ ನಾಯಕರೊಬ್ಬರ ಒಡೆತನದಲ್ಲಿರುವುದರಿಂದ ಜನರ ಬಾಯಲ್ಲಿ ಆ ನಾಯಕ ಹೆಸರು ಹರೆದಾಡುತ್ತಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ