ಡಿ.ಕೆ.ಸಹೋದರರು ಚಿತ್ರನ್ನಾ ಗಿರಾಕಿಗಳು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಲೇವಡಿ ಮಾಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್ ಅಧಿಕಾರಕ್ಕಾಗಿ ಬದುಕುವವರು ಅವರು. ನಾವು ಜನರಿಗೋಸ್ಕರ ಬದುಕುತ್ತಿದ್ದೇವೆ. ಭ್ರμÁ್ಟಚಾರದಲ್ಲಿ ತುಂಬಿದ ಸಿದ್ದರಾಮಯ್ಯನವರಿಗೆ ಮತ್ತೆ ಅಧಿಕಾರದ ಆಸೆ ಬಂದಿದೆ ಎಂದು ಟೀಕಿಸಿದರು.
ಕಾಂಗ್ರೆಸ್‍ನಲ್ಲೇ ಅವರವರಲ್ಲಿ ಹೊಡೆದಾಟ ಶುರುವಾಗಿದೆ. ಸಿದ್ದರಾಮಯ್ಯನವರ ಕಾರ್ಯಕ್ರಮ ಮಾಡಬೇಕಾ ಬೇಡವಾ. ಸಿದ್ದರಾಮಯ್ಯನವರ ಪಂಚೆ ಎಳೆಯಬೇಕಾ ಬೇಡವಾ. ಅವರಲ್ಲಿಯೇ ಜಂಜಾಟ ಶುರುವಾಗಿದೆ. ಸಿದ್ದರಾಮಯ್ಯ ಮೇಲಾ, ಡಿಕೆ ಶಿವಕುಮಾರ್ ಮೇಲಾ ಎಂದು ಗುದ್ದಾಟ ಶುರುವಾಗಿದೆ. ಬಿಜೆಪಿಯಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ. ನಮ್ಮಂತ ಸಾವಿರಾರು ನಾಯಕರನ್ನ ಸೃಷ್ಠಿ ಮಾಡುವ ಶಕ್ತಿ ಬಿಜೆಪಿಗೆ ಇದೆ ಎಂದು ಕೈ ನಾಯಕರಿಗೆ ಇದೇ ವೇಳೆ ಸಚಿವ ಅಶ್ವತ್ಥನಾರಾಯಣ ತಿರುಗೇಟು ಕೊಟ್ಟಿದ್ದಾರೆ.
Laxmi News 24×7