ಮಹಿಳೆಯೊರ್ವಳ ಶವವೊಂದು ಪತ್ತೆಯಾದ ಘಟನೆ ಚಿಕ್ಕೋಡಿ ತಾಲೂಕಿನ ಯಡೂರಿನ ಕೃಷ್ಣಾ ನದಿತೀರದಲ್ಲಿ ನಡೆದಿದೆ…
ಸುಶೀಲಾ ತಾತೋಬಾ ಅನೂಜೆ (68) ಮೃತ ಮಹಿಳೆ ಎಂದು ತಿಳಿದುಬಂದಿದೆ..ಮಹಾರಾಷ್ಟ್ರದ ಶಿರೋಳ ತಾಲೂಕಿನ ನರಸಿಂಹವಾಡಿ ಗ್ರಾಮದ ಮಹಿಳೆ.ಅನಾರೋಗ್ಯದಿಂದ ನರಸಿಂಹವಾಡಿ ಗ್ರಾಮದ ಕೃಷ್ಣಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದಾಳೆ ಎಂದು ಮೃತರ ಸಂಬಂದಿಕರು ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದ್ದಾರೆ..
ಸ್ಥಳಕ್ಕೆ ಅಂಕಲಿ ಪೊಲೀಸ್ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಘಟನೆಯ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸಂಬಂದಿಕರಿಗೆ ಹಸ್ತಾಂತರಿಸಲಾಯಿತು..
ಪ್ರವಾಹದಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದು ಯಡೂರ ಗ್ರಾಮಸ್ಥರನ್ನು ಬೆಚ್ಚಿಬಿಳಿಸಿದೆ.,
Laxmi News 24×7