ಭಾರೀ ಮಳೆಯ ನೀರಿನಿಂದ ಮುಳುಗಡೆಯಾದ ಗೋಕಾಕ – ಶಿಂಗಳಾಪುರ ಸೇತುವೆ ಮೇಲೆ ಬೈಕ್ ಸವಾರರು ಯಾವುದೇ ಭಯವಿಲ್ಲದೇ ಸಂಚಾರ ಮಾಡುತ್ತಿದ್ದು, ಜೀವವನ್ನು ಲೆಕ್ಕಿಸದೇ ಮುಳುಗಡೆಯಾಗಿರುವ ಸೇತುವೆಯ ಮೇಲೆ ಎಗ್ಗಿಲ್ಲದೇ ಸಂಚಾರ ನಡೆಸಿದ್ದಾರೆ.
ವಿಪರೀತ ಮಳೆಯಿಂದಾಗಿ ಮುಳುಗಡೆಯಾದ ಗೋಕಾಕ- ಶಂಗಳಾಪೂರ್ ಸೇತುವೆ ಮೇಲೆ ಭಯವಿಲ್ಲದೇ ವಾಹನ,ಹಾಗೂ ಬೈಕ್‌ಗಳ ಸವಾರರು ಸಂಚಾರ ಮಾಡುತ್ತಿದ್ದಾರೆ. ಗೋಕಾಕ ಪಟ್ಟಣದ ಹೊರವಲಯದಲ್ಲಿರುವ ಈ ಸೇತುವೆ ಮಳೆ ಹೆಚ್ಚಾಗಿ ಸುರಿದಿದ್ದರಿಂದ ಗರಿಯುವ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಜಲಾವೃತಗೊಂಡಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿ ಒಳಹರಿವು ಹೆಚ್ಚಳವಾಗಿದೆ. ಹಾಗಾಗಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮುಳುಗಡೆಯಾಗಿದೆ. ಇನ್ನು ಮುಳುಗಡೆಯಾದ ಸೇತುವೆ ಮೇಲೆ ವಾಹನಗಳ ಪಾರ್ಕ್ ಮಾಡಿದ ಸಾರ್ಚಜನಿಕರು ತಮ್ಮ ವಾಹನಗಳನ್ನು ತೊಳೆಯುತ್ತಿರುವ ದೃಶ್ಯ ವೈರಲ್ ಆಗಿದೆ.