ತುಮಕೂರು: ನಗರದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗದಂತೆ ತಡೆಗಟ್ಟಲು ಶುಕ್ರವಾರ ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಅಪಾರ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ.
ತುಮಕೂರಿನಲ್ಲಿ ಬಕ್ರೀದ್ ಹಬ್ಬ ಹಾಗೂ ಅಕ್ರಮ ಚಟುವಟಿಕೆ ಹೆಚ್ಚಿದ್ದು, ಈ ಹಿನ್ನಲೆಯಲ್ಲಿ ನಗರದಲ್ಲಿ ಮುಂಜಾನೆ ರೌಡಿಶೀಟರ್ ಮನೆಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ನಂತರ ನಗರದ ಚಿಲುಮೆ ಸಮುದಾಯ ಭವನದಲ್ಲಿ ಪರೇಡ್ ಮಾಡಲಾಯಿತು. ನಗರ ವ್ಯಾಪ್ತಿಯಲ್ಲಿನ 84 ಜನ ರೌಡಿಶೀಟರ್ ಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.