ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಕ್ಷಣಕ್ಷಣಕ್ಕೂ ಬೆಳಗಾವಿಯ ಗಡಿಭಾಗದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.ಇದರಿಂದ ನದಿ ಪಾತ್ರದಜನರಲ್ಲಿ ಮತ್ತೆ ಪ್ರವಾಹದ ಭೀತಿಎದುರಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರದಿಂದಾಗಿರಾಜ್ಯಕ್ಕೆಅಪಾರ ಪ್ರಮಾಣದ ನೀರುಹರಿದು ಬರುತ್ತಿದೆ.ಮಹಾರಾಷ್ಟ್ರದಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದದಲ್ಲಿಮಳೆ ಸುರಿಯುತ್ತಿದೆ.ಇದರಿಂದಾಗಿಬೆಳಗಾವಿ ಜಿಲ್ಲೆಯಕೃ.ದೂದಗಂಗಾ ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈಗಾಗಲೇ ಚಿಕ್ಕೋಡಿ, ರಾಯಬಾಗ, ಅಥಣಿತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಅಲರ್ಟಘೋಷಣೆ ಮಾಡಲಾಗಿದೆ.
ಈಗಾಗಲೆ ನದಿ ಪಾತ್ರದಲ್ಲಿಜನರಲ್ಲಿಎಚ್ಚರ ವಹಿಸುವಂತೆ ಜಿಲ್ಲಾಡಳಿದ ಸೂಚನೆ ನೀಡಿದೆ.ನದಿ ಪಾತ್ರದ ಗ್ರಾಮಗಳಿಗೆ ತೆರಳಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.ಎನ್.ಡಿ.ಆರ್.ಎಫ್‍ತಂಡಗಳ ಮೂಲಕ ನದಿ ತೀರದ ಗ್ರಾಮಗಳಲ್ಲಿ ಜಾಗೃತಿಅಭಿಯಾನ ನಡೆಸಲಾಗುತ್ತಿದೆ.ಮಳೆ ಹೀಗೆ ಮುಂದುವರೆದಲ್ಲಿ ಪ್ರವಾಹ ಭೀತಿಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಸತತ ಮೂರು ವರ್ಷಗಳಿಂದ ಪ್ರವಾಹದಿಂದ ತತ್ತರಿಸಿರುವ ಜನ ಈಗ ಮತ್ತೆ ಪ್ರವಾಹದ ಭೀತಿಯಲ್ಲಿದ್ದಾರೆ.