Breaking News

ಅಳಿಯನ ಜೊತೆ ಅತ್ತೆಯ ಲವ್ವಿ-ಡವ್ವಿ:

Spread the love

ಪ್ರೀತಿ ಪ್ರೇಮದ ಅಮಲಿನಲ್ಲಿ ಇಬ್ಬರೂ ತಮ್ಮ ಸಂಬಂಧಗಳನ್ನೇ ಮೆರೆತಿದ್ದಾರೆ. ಅಲ್ಲದೆ ಪ್ರೇಮ ಪಕ್ಷಿಗಳಾಗಿ ಜೊತೆ ಜೊತೆಯಾಗಿ ತಿರುಗಾಡಲಾರಂಭಿಸಿದ್ದರು.ಪ್ರೀತಿಗೆ ಕಣ್ಣಿಲ್ಲ ನಿಜ, ಆದರೆ ಪ್ರೀತಿಸೋರಿಗೆ ಬುದ್ದಿ ಇಲ್ವಾ?

ಎಂಬ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ. ಅದರಲ್ಲೂ ಕೆಲ ಪ್ರಕರಣಗಳಲ್ಲಿ ಹೀಗೂ ಇರುತ್ತಾರಾ ಎಂದೆನಿಸಿಬಿಡುತ್ತೆ. ಅಂತಹದೊಂದು ವಿಚಿತ್ರ ಪ್ರಕರಣವೊಂದು ರಾಜಸ್ಥಾನದ ಬಾರ್ಮರ್​ನಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ ಅತ್ತೆ ಮತ್ತು ಅಳಿಯನೇ ಪ್ರಮುಖ ಪಾತ್ರಧಾರಿಗಳು. ಅಂದರೆ ವರ್ಷಗಳ ಹಿಂದೆ ದರಿಯಾ ದೇವಿ (38) ತನ್ನ ಮಗಳನ್ನು ಖರಾಂತಿಯಾ ಪ್ರದೇಶದ ಹೋತಾರಾಮ್ (22) ​ಗೆ ವಿವಾಹ ಮಾಡಿಕೊಟ್ಟಿದ್ದರು. ಆರಂಭದಲ್ಲಿ ಅತ್ತೆ-ಅಳಿಯನ ಸಂಬಂಧದಲ್ಲಿದ್ದ ದರಿಯಾ ದೇವಿ ಹಾಗೂ ಹೋತಾರಾಮ್ ನಡುವೆ ಹೆಚ್ಚಿನ ಅನೋನ್ಯತೆ ಮೂಡಿದೆ. ಈ ಅನೋನ್ಯತೆಯು ನಿಧಾನವಾಗಿ ಅಳಿಯನ ಮೇಲಿನ ಪ್ರೇಮವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ತನ್ನ ಮನದ ಇಂಗಿತವನ್ನು ದರಿಯಾ ದೇವಿ ಅಳಿಯನಿಗೆ ತಿಳಿಸಿದ್ದಾಳೆ. ಆದರೆ ಇತ್ತ ಹೋತಾರಾಮ್​ಗೂ ಅದಾಗಲೇ ಅತ್ತೆಯ ಮೇಲೆ ಪ್ರೇಮಾಂಕುರವಾಗಿತ್ತು.

ಪ್ರೀತಿ ಪ್ರೇಮದ ಅಮಲಿನಲ್ಲಿ ಇಬ್ಬರೂ ತಮ್ಮ ಸಂಬಂಧಗಳನ್ನೇ ಮೆರೆತಿದ್ದಾರೆ. ಅಲ್ಲದೆ ಇಬ್ಬರೂ ಪ್ರೇಮ ಪಕ್ಷಿಗಳಾಗಿ ಜೊತೆ ಜೊತೆಯಾಗಿ ತಿರುಗಾಡಲಾರಂಭಿಸಿದ್ದರು. ಈ ವಿಚಾರ ಮಗಳಿಗೆ ಅನುಮಾನ ಮೂಡಿಸದಿದ್ದರೂ, ಊರವರಿಗೆ ಗೊತ್ತಾಗಿತ್ತು. ಇದರ ನಡುವೆ ಇಬ್ಬರೂ ಜೊತೆಯಾಗಿ ಬದುಕಲು ಕೂಡ ನಿರ್ಧರಿಸಿದ್ದರು. ಆದರೆ ಮಗಳಿಗೆ ಮೋಸ ಮಾಡಿ, ಸಮಾಜವನ್ನು ಎದುರು ಹಾಕಿಕೊಳ್ಳುವ ಭಯ ಇಬ್ಬರಲ್ಲೂ ಆವರಿಸಿದೆ.

ಅಲ್ಲದೆ ಇಬ್ಬರ ನಡುವಿನ ಸಂಬಂಧದ ಬಗ್ಗೆ  ಊರಲ್ಲಿ ಚರ್ಚೆಗಳು ಶುರುವಾಗಿದ್ದವು. ಇದರಿಂದ ಅವಮಾನಿತರಾದ ಅತ್ತೆ-ಅಳಿಯ ಜೋಡಿ ಆತ್ಮಹತ್ಯೆಯ ದಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮನೆಯಿಂದ ಪಡಿತರ ತರಲು ಹೋದ ಹೋತಾರಾಮ್ ಹಾಗೂ ದರಿಯಾ ದೇವಿ ಮತ್ತೆ ಹಿಂತಿರುಗಿರಲಿಲ್ಲ. ಆರಂಭದಲ್ಲಿ ಇಬ್ಬರೂ ಊರು ಬಿಟ್ಟು ಓಡಿ ಹೋಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮರುದಿನ ಊರ ಹೊರಗಿನ ಜಾಗದ ಮರವೊಂದರಲ್ಲಿ ಇಬ್ಬರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಈ ಬಗ್ಗೆ ಬಾರ್ಮರ್​ನ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ಇಬ್ಬರ ಬಗ್ಗೆಗಿನ ಮಾಹಿತಿ ಕಲೆಹಾಕಿದ್ದಾರೆ. ಈ ವೇಳೆ ಇಬ್ಬರು ಅದೇ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಅಲ್ಲದೆ ಹೆಚ್ಚಿನ ತನಿಖೆಯ ವೇಳೆ ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿದೆ. ಜೊತೆಯಾಗಿ ಬಾಳುವ ಅವಕಾಶ ಸಿಗಲ್ಲ ಎಂಬ ಭಯದಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿಯ ಅಮಲಿನಲ್ಲಿ ಮೈಮರೆತ ಅತ್ತೆ-ಅಳಿಯನ ಪ್ರೇಮಕಥೆ ದಾರುಣ ಅಂತ್ಯ ಕಂಡಿದೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ