ಕೆ ಎಲ್ ಇ ಸಂಸ್ಥೆಯ ಜೆ ಎನ್ ಎಮ್ ಸಿ ಆಡಿಟೋರಿಯಂ ನಲ್ಲಿ ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿಯ ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ಸತ್ಕರಿಸುವ ಕಾರ್ಯಕ್ರಮ
ಕೋವಿಡ್-19 ಸಮಯದಲ್ಲಿ ತಮ್ಮ ಜೀವದ ಹಂಗನ್ನೇ ತೊರೆದು ಕೊರೋನಾ ಸೋಂಕಿತರನ್ನು ರಕ್ಷಿಸಿ, ಅವರ ಸೇವೆಯಲ್ಲಿ ನಿರತರಾದ ಎಲ್ಲ ವಾರಿಯರ್ಸ್ ಗಳ ಸೇವೆಗಳನ್ನು ಪರಿಗಣಿಸಿ, ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿ ವತಿಯಿಂದ ಸತ್ಕರಿಸಲಾಯಿತು.
ನಂತರ ಬಾಹು ಕದಂ ಹಾಗೂ ಭರತ್ ಗಣೇಶಪುರೆ ಇವರ ವತಿಯಿಂದ ಹಾಸ್ಯಭರಿತ ಕಾರ್ಯಕ್ರಮವು ಜರುಗಿತು. ಜೀವನದಲ್ಲಿ ನಗುವಿದ್ದರೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಬಹುದು ಎನ್ನುವುದು ಹಾಸ್ಯಭರಿತ ಕಾರ್ಯಕ್ರಮದ ಉದ್ದೇಶವಾಗಿತ್ತು.
ಈ ಸಮಯದಲ್ಲಿ ಡಾ. ಬಿಜ್ಜರಗಿ, ರಾಜಶ್ರೀ ಅನಿಗೊಳ, ಲಾತ್ಕರ್, ಡಾ. ವಿಜಯ ದೇಸಾಯಿ, ಹಲವಾರು ಕೊರೋನಾ ವಾರಿಯರ್ಸ್ ಉಪಸ್ಥಿತರಿದ್ದರು.