Breaking News

ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

Spread the love

2021-22ನೇ ಸಾಲಿನ ಸ್ನಾತಕೋತ್ತರ  ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್​ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್​ಟಿಸಿ (KSRTC) ನಿಗಮವು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ.ಬೆಂಗಳೂರು: 2021-22ನೇ ಸಾಲಿನ ಸ್ನಾತಕೋತ್ತರ ( Post Graduate ) ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್​ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್​ಟಿಸಿ ( KSRTC ) ನಿಗಮವು ವಿದ್ಯಾರ್ಥಿಗಳ ಉಚಿತ ( Free ) ಬಸ್ ಪಾಸ್ ( Bus Pass ) ಅವಧಿಯನ್ನು ವಿಸ್ತರಿಸಿದೆ.

ಕಾನೂನು (LAW) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್​ವರೆಗೂ ನಡೆಯಲಿದೆ. ಆದರೆ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಏಪ್ರಿಲ್ ತಿಂಗಳಿಗೆ ಕೊನೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳ ಬಸ್​ ಪಾಸ್​​ ಅವಧಿಯನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಕಾಲೇಜು ಅಡ್ಮಿಷನ್ ರಶೀದಿ, ಹಳೇ ಪಾಸ್ ತೋರಿಸಿ ಬಸ್​​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಕೆಎಸ್​ಆರ್​ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ