Breaking News

ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವಕರು ಪ್ರತಿಭಟನೆ

Spread the love

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವಕರು ಪ್ರತಿಭಟನೆ ನಡೆಸಿದರು.

ಚಿಕ್ಕೋಡಿ ಪಟ್ಟಣದ ನಾಗರಮುನ್ನೋಳಿ ಬ್ಲಾಕ್ ‌ಕಾಂಗ್ರೆಸ್ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನೆಯು ಬಸವ ವೃತ್ತದ ಮೂಲಕ ಸಾಗಿತು. ಪ್ರತಿಭಟನೆ ಉದ್ದಕೂ ಕಾಂಗ್ರೆಸ್ ಕಾರ್ಯಕರ್ತರು, ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಂತರ ಉಪವಿಭಾಗಧಿಕಾರಿ ಸಂತೋಷ ಕಾಮಗೌಡರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿ ಅಗ್ನಿಪಥ ‌ಯೋಜನೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೇ ಅವರು ಮಾತನಾಡಿ ಈ ಅಗ್ನಿಪಥ ‌ಯೋಜನೆಯು ಯುವಕರ ದಿಕ್ಕು ತಪ್ಪಿಸುವ ಯೋಜನೆಯಾಗಿದೆ. ಗುತ್ತಿಗೆ‌ ಆಧಾರದ ರೀತಿಯ ಯೋಜನೆ ಇದಾಗಿದೆ. ಇದರಿಂದ ಯುವಕರ ಭವಿಷ್ಯ‌ ನಿರ್ಮಾಣವಾಗುವುದಿಲ್ಲ ಕೂಡಲೇ ಕೇಂದ್ರ ಸರ್ಕಾರ ಈ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಲಕ್ಷ್ಮಣರಾವ ಚಿಂಗಳೆ ಆಗ್ರಹಿಸಿದರು..

ನಂತರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ‌ಮೊಹಿತೆ ಮಾತನಾಡಿ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಯುವಕರು ರೊಚ್ಚಿಗೆದ್ದಿದಾರೆ. ಯುವಕರು ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಪೊಲೀಸರ ಮೂಲಕ ಸರ್ಕಾರ ಯುವಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಯುವಕರು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಈ ಸಂಧರ್ಭದಲ್ಲಿ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಅಶೋಕ ಮಜಲಟ್ಟಿ, ರಾಜಕುಮಾರ ಕೋಟಗಿ, ಅರುಣ ನರಗುಂದೆ, ಬಾಬು ಪಾಟೀಲ, ಮಂಜುನಾಥ ಗೇವಾರಿ, ಕೃಷ್ಣಾ ಜುಗುಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ