ಬೆಳಗಾವಿ ಜೂ. 26: “ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ. ಅದು ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ನಡುವಿನ ಮೈತ್ರಿ ಮೂಲಕ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ ಸಚಿವರು, “ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಕಾಂಗ್ರೆಸ್, ಶಿವಸೇನೆ ಮೂರು ಪಕ್ಷಗಳು ಒಟ್ಟಾದವು.
ಆದರೆ ಈ ಸರ್ಕಾರ ಬಹುದಿನಗಳವರೆಗೂ ಸಾಗುವ ಅನುಮಾನ ಈ ಹಿಂದೆಯೇ ಮೂಡಿತ್ತು” ಎಂದರು.
“ಒಂದು ವಾಹನ ಸುಸೂತ್ರವಾಗಿ ಚಲಾಯಿಸಲು ಒಬ್ಬರೆ ಚಾಲಕನಿರಬೇಕು. ಒಂದು ವಾಹನಕ್ಕೆ ಮೂವರು ಚಾಲಕರಿದ್ದು, ಅವರಲ್ಲಿ ಒಬ್ಬರ ಕಡೆ ಸ್ಟೇರಿಂಗ್, ಒಬ್ಬರ ಕಡೆ ಎಕ್ಸಿಲೇಟರ್, ಒಬ್ಬರ ಕಡೆ ಬ್ರೇಕ್ ಹಿಡಿದು ನಡೆಸಿದರೆ ನಿರ್ವಹಣೆ ಅಸಾಧ್ಯ” ಎಂದು ಮೂರು ಪಕ್ಷಗಳ ಮೈತ್ರಿ ಕುರಿತು ಸಚಿವರು ವ್ಯಂಗ್ಯವಾಡಿದರು.
ಕಾರ್ಯಕರ್ತರು ಒಪ್ಪುವುದಿಲ್ಲ
“ಶಿವಸೇನೆ ನಾಯಕರು ಮತ್ತು ಕಾರ್ಯಕರ್ತರು ಕಳೆದ 4-5 ದಶಕಗಳಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನವರನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದರೂ ಏಕಾಎಕಿ ಅಧಿಕಾರದಾಸೆಗೆ ಆ ಎರಡು ಪಕ್ಷದವರೊಂದಿಗೆ ಶಿವಸೇನೆ ಪಕ್ಷ ಹೊಂದಾಣಿಕೆ ಮಾಡಿಕೊಂಡರೆ ಕಾರ್ಯಕರ್ತರು ಒಪ್ಪುವುದಿಲ್ಲ. ಸಂದರ್ಭ ನೋಡಿಕೊಂಡು ಪಕ್ಷದಿಂದ ಹೊರ ನಡೆಯುತ್ತಾರೆ. ಶಿವಸೇನೆ ಕಾರ್ಯಕರ್ತರೇ ಈ ಹೊಂದಾಣಿಕೆ ಒಪ್ಪದಿದ್ದರೆ ಅಂತಹ ಸರ್ಕಾರಕ್ಕೆ ಆಯಸ್ಸು ಕಡಿಮೆ” ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಶಿವಸೇನೆ-ಬಿಜೆಪಿ ನಡುವೆ ಸಾಮ್ಯತೆ ಇದೆ