ಪೈರಸಿ ಎಂಬುದು ಚಿತ್ರರಂಗಕ್ಕೆ ಪಿಡುಗು ಆಗಿದ್ದು ಇಡೀ ಚಿತ್ರರಂಗವೇ ಇದರ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಯುವ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು.
ನಗರದಲ್ಲಿ ಇಂದು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು ಒಂದು ಸಿನಿಮಾಗೆ ಪೈರಸಿಯಾಗುತ್ತಿದ್ದಾಗ ಯಾರದ್ದೋ ಸಿನಿಮಾ ಎನ್ನದೆ ಎಲ್ಲರೂ ಇದು ನಮ್ಮ ಕನ್ನಡ ಸಿನಿಮಾ ನಮ್ಮ ಚಿತ್ರರಂಗಕ್ಕೆ ಸಂಬಂಧಿಸಿದ್ದು ಎಂದು ಎಲ್ಲರೂ ಒಗ್ಗಟ್ಟಾಗಿ ಪೈರಸಿ ವಿರುದ್ಧ ಹೋರಾಟ ಮಾಡಬೇಕು ಎಂದರು
ಪೈರಸಿ ಸಿನಿಮಾಗಳ ಲಿಂಕ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವವರ ವಿರುದ್ಧ ಸಂಬಂಧಿಸಿದ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದರು.
Laxmi News 24×7