Breaking News

ಜಮೀನಿನಲ್ಲಿ ಮರಾಠಾ ಸಮಾಜದವರು ಬಂದು ಬೆಳೆಹಾನಿ ಮಾಡುತ್ತಿದ್ದಾರೆ: ನ್ಯಾಯಕ್ಕಾಗಿ ಕಮಿಶನರ್ ಮೊರೆಹೋದ ದಲಿತರು

Spread the love

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಪರಿಶಿಷ್ಠ ಜಾತಿಗೆ ಸೇರಿದವರಿಗೆ ಸೇರಿದ ಜಮೀನಿನಲ್ಲಿ ಮರಾಠಾ ಸಮಾಜದವರು ಬಂದು ಬೆಳೆಹಾನಿ ಮಾಡುತ್ತಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ತಮಗೆ ನ್ಯಾಯ ಕೊಡಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಭೀಮವಾದ ಸಂಘಟನೆ ವತಿಯಿಂದ ಬೆಳಗಾವಿ ಎಸ್‍ಪಿ ಹಾಗೂ ಕಮಿಶನರ್‍ರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಸೇರಿದ 300/285 ರಿಜಿಸ್ಟರ್ ಸರ್ವೆ ನಂಬರ್‍ನಲ್ಲಿ ಒಟ್ಟು 25 ಎಕರೆ ಜಮೀನಿದೆ. ಇದನ್ನು ನಮ್ಮ ಹಿರಿಯರ ಕಾಲದಿಂದಲೂ ನಾವು ಉಳುಮೆ ಮಾಡುತ್ತ ಬಂದಿದ್ದೇವೆ. ಆದರೆ ಇತ್ತೀಚೆಗೆ ಮರಾಠಾ ಸಮುದಾಯದವರು ಇಲ್ಲಿ ಬಂದು ನಮ್ಮ ಬೆಳೆಯನ್ನು ಹಾಳು ಮಾಡುತ್ತಿದ್ದಾರೆ. ಈ ಕುರಿತಂತೆ ಬೆಳಗಾವಿಯ ಜಿಲ್ಲಾಧಿಕಾರಿಗಳು ಹಾಗೂ ಎಸ್‍ಪಿ ರವರಿಒಗೆ ಮನವಿ ನೀಡಿದರೂ ಕೆಲಸವಾಗಿಲ್ಲ.

ಹಾಗಾಗಿ ತಮಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿಯ ಎಸ್‍ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಕಮಿಶನರ್ ಡಾ. ಬೋರಲಿಂಗಯ್ಯನವರಿಗೆ ಮನವಿ ಮಾಡಿದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮಸ್ಥರು, ನಮ್ಮ ಹಿರಿಯರ ಕಾಲದಿಂದಲೂ ಬೆಳಗುಂದಿ ಗ್ರಾಮದ ರಿ.ಸ.ನಂ 300ಹಾಗೂ 285ರ 25 ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತ ಬಂದಿದ್ದೇವೆ. ಆದರೆ ಇತ್ತೀಚೆಗೆ ಕೆಲ ಮರಾಠಾ ಸಮುದಾಯದವರು ಇಲ್ಲಿಗೆ ಬಂದು ನಮ್ಮ ಬೆಳೆಗಳನ್ನು ಹಾಳು ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ