ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಹಾಡುಹಗಲೆ ವೃದ್ದೆಯೊಬ್ಬರ ಕೊರಳಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ನಿವಾಸಿ ಕನಕರತ್ನ ಎಂಬ ವೃದ್ದೆ ಚಿನ್ನದ ಸರ ಕಳೆದುಕೊಂಡವರು.
ಅದು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಸರವಾಗಿದೆ. ಗಂಗಾವತಿ ಇಂದ ಬಾಪಿರೆಡ್ಡಿ ಕ್ಯಾಂಪ್ ಗೆ ಹೊರಟಿದ್ದಾಗ, ಬಸ್ ನಿಲ್ದಾಣದಲ್ಲಿ ಕನಕರತ್ನ ಅವರ ಚಿನ್ನದ ಸರವನ್ನು ಕಳ್ಳರು ಎಗುರಿಸಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Laxmi News 24×7