ಬೆಂಗಳೂರು: ಬೆಂಗಳೂರಿನ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಕ್ರಮ ಕೈಗೊಳ್ಳದ ಬಿಡಿಎಗೆ(BDA) ಹೈಕೋರ್ಟ್(High Court) ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್ ಆದೇಶಕ್ಕೆ ಬಿಡಿಎ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಆಗಾಗ ಪ್ರಧಾನಮಂತ್ರಿ(PM Narendra Modi) ಬಂದರೆ ರಸ್ತೆಗಳು ಸರಿಹೋಗಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.
ಆಗಾಗ ಪಿಎಂ, ರಾಷ್ಟ್ರಪತಿ ಬಂದ್ರೆ ರಸ್ತೆ ಉತ್ತಮಗೊಳ್ಳಬಹುದು. ಮೊನ್ನೆ 23 ಕೋಟಿ ಖರ್ಚು ಮಾಡಿ ಗುಂಡಿ ಮುಚ್ಚಿದ್ದೀರಾ. ಪ್ರತಿಬಾರಿ ಬೇರೆ ಬೇರೆ ಮಾರ್ಗವಾಗಿ ಪಿಎಂ ಬಂದರೆ ಉತ್ತಮ. ಅವರನ್ನು ಮೆಚ್ಚಿಸಲಾದರೂ ರಸ್ತೆಗಳನ್ನು ಸರಿಪಡಿಸಬಹುದು ಎಂದು ನ್ಯಾ.ಬಿ.ವೀರಪ್ಪ, ನ್ಯಾ.K.S.ಹೇಮಲೇಖಾರ ಪೀಠ ಅಭಿಪ್ರಾಯ ಪಟ್ಟಿದೆ. ಹಾಗೂ 2 ವಾರದಲ್ಲಿ ಅರ್ಜಿದಾರರ ನಿವೇಶನಕ್ಕೆ ಸೌಕರ್ಯ ಒದಗಿಸಿ ಎಂದು ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ. ವಿಶ್ವೇಶ್ವರಯ್ಯ ಬಡಾವಣೆ ನಿವೇಶನಕ್ಕೆ ಸೌಕರ್ಯ ಕಲ್ಪಿಸದ ಹಿನ್ನೆಲೆ ಪಿ.ಶಾರದಮ್ಮ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದರು. ಈ ವಿಚಾರವಾಗಿ ವಿಚಾರಣೆ ನಡೆಸಿದ ಹೈಕೋರ್ಟ್ ಕ್ರಮ ಕೈಗೊಳ್ಳದ ಬಿಡಿಎಗೆ ತರಾಟೆಗೆ ತೆಗೆದುಕೊಂಡಿದೆ.
Laxmi News 24×7