ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತನ್ನ 13 ವರ್ಷದ ಮಗಳನ್ನು ಕೂಡ ಕೊಲ್ಲಲು ಯತ್ನಿಸಿ ಯಶವಂತಪುರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು. ಇಂಥದ್ದೊಂದು ಘಟನೆಗೆ ಕಾರಣವಾಗಿರೋದು ಬೆಂಗಳೂರಿನ ಯಶವಂತಪುರದ ಮತ್ತಿಕೆರೆ. ತಾನೇಂದ್ರ ಎಂಬಾತ ತನ್ನ ಪತ್ನಿ ಅನುಸೂಯಳನ್ನು ಕೊಲೆ ಮಾಡಿ ನಂತರ ತನ್ನ 13 ವರ್ಷದ ಮಗಳನ್ನು ಕೊಲೆಗೆ ಯತ್ನಿಸಿ ಪೊಲೀಸರಿಗೆ ಎರಡು ಕೊಲೆ ಮಾಡಿರುವುದಾಗಿ ಕಾಲ್ ಮಾಡಿದ್ದ.
ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ತಾನೇಂದ್ರ ಮತ್ತು ಅನುಸೂಯ ಕುಟುಂಬ ನಿರ್ವವಹಣೆಗೆ ಒಂದೂವರೇ ಲಕ್ಷದಷ್ಟು ಹಣ ಸಾಲ ಮಾಡಿಕೊಂಡಿದ್ರಂತೆ. ಹಣ ನೀಡಿದ್ದ ಸಾಲಗಾರರು ಪ್ರತಿದಿನ ಮನೆಯ ಬಳಿ ಬಂದು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದರಂತೆ. ಸಾಲ ತಿರಿಸೋ ವಿಚಾರಕ್ಕೆ ನಿನ್ನೆ ರಾತ್ರಿ ಗಂಡ-ಹೆಂಡತಿಯ ನಡುವೆ ಗಲಾಟೆ ನಡೆದಿದೆ. ಇದರಿಂದ ತೀವ್ರವಾಗಿ ನೊಂದ ಗಂಡ ತಾನೇಂದ್ರ ಹೆಂಡತಿ ಮತ್ತು ಮಗಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದು ಅಂತಾ ನಿರ್ಧಾರ ಮಾಡಿ ಪತ್ನಿಗೆ ತಡರಾತ್ರಿ 2 ಗಂಟೆ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಪತ್ನಿ ಕೊಲೆಯ ಬಳಿಕ ತನ್ನ 13 ವರ್ಷದ ಮಗಳನ್ನು ಕೊಲೆ ಮಾಡೋಕೆ ಯತ್ನಿಸಿದ್ದ. ಈ ವೇಳೆ ಚಾಕು ಇರಿತದಿಂದ ಮಗಳು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾಳೆ.
ಮಗಳು ಕೂಡ ಸಾವನ್ನಪ್ಪಿದ್ದಾಳೆ ಅಂತಾ ತಿಳಿದ ತಾನೇಂದ್ರ ಕೆಲ ಕಾಲ ಅವರ ಜೊತೆಗೆ ಕಾಲ ಕಳೆದಿದ್ದ. ಯಾವಾಗ ಮಗಳಿಗೆ ಮತ್ತೆ ಎಚ್ಚರವಾಯ್ತು ಮತ್ತೆ ಕೊಲೆ ಮಾಡೋಕೆ ಮುಂದಾಗಿ ಕೊನೆ ಸಮಯದಲ್ಲಿ ಏನಾಯ್ತೋ ಏನೋ, ಯಶವಂತಪುರ ಪೊಲೀಸರಿಗೆ ಕಾಲ್ ಮಾಡಿ ಕೊಲೆ ಮಾಡಿರೋದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ.
Laxmi News 24×7