ಮುಂಬೈ : ಶಿವಸೇನೆ ನಾಯಕ ಹಾಗೂ ಸಂಪುಟ ಸಚಿವ ಏಕನಾಥ್ ಶಿಂಧೆ ಕರೆ ನೀಡಿದ್ದ ಬಂಡಾಯ ಕೊನೆಗೂ ಯಶಸ್ವಿಯಾಗಿದೆ. ಯಾಕಂದ್ರೆ, ಈಗ ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಆದ್ದರಿಂದ, ಠಾಕ್ರೆ ಸರ್ಕಾರದ ಅಂತಿಮವಾಗಿ ಎರಡೂವರೆ ವರ್ಷಗಳಲ್ಲಿ ಅಂತ್ಯಗೊಂಡಿದೆ.
ಏಕನಾಥ್ ಶಿಂಧೆ ಶಿವಸೇನೆ ವಿರುದ್ಧ ದೊಡ್ಡ ಬಂಡಾಯವನ್ನೇ ಆರಂಭಿಸಿದ್ದಾರೆ. ಎಲ್ಲಾ ಶಾಸಕರೊಂದಿಗೆ ಶಿಂಧೆ ಈಗ ಗುವಾಹಟಿಯಲ್ಲಿ ತಂಗಿದ್ದು, ಏಕನಾಥ್ ಶಿಂಧೆ 33 ಶಾಸಕರ ಸೇನೆಯನ್ನ ಹೊಂದಿದ್ದಾರೆ. ಏಕನಾಥ್ ಶಿಂಧೆ ಇಂದು ರಾಜ್ಯಪಾಲರನ್ನ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ. ಶಿವಸೇನೆ ಸಂಸದ ಸಂಜಯ್ ರಾವತ್ ಈಗ ಅದಕ್ಕೆ ಕೈ ಹಾಕಿದ್ದಾರೆ.
ಸಂಜಯ್ ರಾವುತ್ ಅವ್ರು ಠಾಕ್ರೆ ಸರ್ಕಾರದ ಪತನದ ಸುಳಿವು ನೀಡಿದ್ದು, ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯು ವಿಧಾನಸಭೆಯ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.
Laxmi News 24×7