Breaking News

ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

Spread the love

ಮುಂಬೈ: ಒಂದೆಡೆ ಮಹಾರಾಷ್ಟ್ರ ಸರ್ಕಾರದ ಪತನದ ಅಂಚಿನಲ್ಲಿದ್ದರೆ, ಅದೇ ಇನ್ನೊಂದೆಡೆ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ್ ಮುಂಡೆ ನನ್ನ ಗಂಡ, ನಾನು ಆತನ ಎರಡನೆಯ ಹೆಂಡತಿ ಎಂದು ಭಾರಿ ಕೋಲಾಹಲ ಸೃಷ್ಟಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

 

ಕರುಣಾ ಶರ್ಮಾ (43) ಎಂಬ ಮಹಿಳೆ ಬಂಧನಕ್ಕೆ ಒಳಗಾಗಿದ್ದಾರೆ. ಈಕೆ ಈ ಹಿಂದೆ ಭಾರಿ ಸುದ್ದಿ ಮಾಡಿದ್ದರು. ತಾವು ಮುಂಡೆ ಅವರ ಎರಡನೆಯ ಪತ್ನಿ ಎಂದು ಹೇಳಿಕೊಂಡು ತೀವ್ರ ಗಲಾಟೆ ಸೃಷ್ಟಿಸಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ಈಕೆ ನೀಡಿದ್ದರು. ಇದೀಗ ಈಕೆಯನ್ನು ಬೇರೊಂದು ಕೇಸ್​ನಲ್ಲಿ ಬಂಧಿಸಲಾಗಿದೆ. ಅದಕ್ಕೆ ಕಾರಣ, ಈಕೆ ಇನ್ನೊಬ್ಬಳ ಪತಿಯ ಜತೆ ಲಾಡ್ಜ್​ನಲ್ಲಿ ಸಿಕ್ಕಿಬಿದ್ದದ್ದೂ ಅಲ್ಲದೇ ಆ ವ್ಯಕ್ತಿಯ ಪತ್ನಿಗೆ ಜಾತಿ ನಿಂದನೆ ಮಾಡಿದ್ದು!

23 ವರ್ಷದ ಗೃಹಿಣಿಯೊಬ್ಬಳು ಕರುಣಾ ಶರ್ಮಾ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ. ಈಕೆ ತನ್ನ ಗಂಡನ ಮೇಲೆ ಕಣ್ಣು ಹಾಕಿರುವುದಾಗಿ ಆಕೆ ಹೇಳಿದ್ದಾಳೆ. ‘ನಿನ್ನ ಗಂಡನನ್ನು ನಾನು ಮದುವೆಯಾಗುತ್ತಿದ್ದೇನೆ, ನೀನು ಆತನಿಗೆ ಡಿವೋರ್ಸ್​ ಕೊಡದೇ ಹೋದರೆ ಕೊಲೆ ಮಾಡುತ್ತೇನೆ ಎಂದು ಕರುಣಾ ಶರ್ಮಾ ಬೆದರಿಕೆ ಹಾಕಿದ್ದೂ ಅಲ್ಲದೇ ಹಾಕಿ ಸ್ಟಿಕ್​ನಿಂದ ಹಲ್ಲೆ ನಡೆಸಿದ್ದಾಳೆ’ ಎಂದು ಗೃಹಿಣಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇಷ್ಟೇ ಅಲ್ಲದೇ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಜಾತಿ ಆಧಾರದ ಮೇಲೆ ನಿಂದಿಸಿರುವುದಾಗಿ ಈಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ತನಿಖೆ ಕೈಗೊಳ್ಳುವ ವೇಳೆ ಕರುಣಾ ಶರ್ಮಾ ಮತ್ತು ಈ ಗೃಹಿಣಿಯ ಪತಿ ಇಬ್ಬರೂ ಪುಣೆಯ ಲಾಡ್ಜ್‌ ಒಂದರಲ್ಲಿ ನೆಲೆಸಿದ್ದರು. ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿವಿಧ ಸೆಕ್ಷನ್​ಗಳ ಅಡಿ ಕೇಸು ದಾಖಲು ಮಾಡಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ