ಬೆಂಗಳೂರು: ಮಗಳನ್ನು ಹುಡುಕಿ ಬೆಂಗಳೂರಿಗೆ ಬಂದಿದ್ದ ವೃದ್ಧೆ ತಾಯಿಗೆ ಮಗಳನ್ನು ಒಪ್ಪಿಸಿ ಪುಲಿಕೇಶಿನಗರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಮೊಬೈಲ್ ಅನ್ನು ತಮಿಳುನಾಡಿನಲ್ಲಿಯೇ ಬಿಟ್ಟು ಮಗಳನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ವೃದ್ದೆಯು, ಮಗಳ ಹೆಸರು ಬಿಟ್ಟು ಬೇರೇನು ಗೊತ್ತಿಲ್ಲದೇ ರಸ್ತೆಯಲ್ಲಿ ಹುಡುಕಾಡುತ್ತಾ ಕಣ್ಣೀರು ಹಾಕುತ್ತಿದ್ದರು.
ಇದನ್ನು ಗಮನಿಸಿದ ಪುಲಕೇಶಿ ನಗರದ ಹೊಯ್ಸಳ ಸಿಬ್ಬಂದಿಯು, ಪುಲಿಕೇಶಿನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ನಂತರ ವೃದ್ದೆಯ ಮಗಳನ್ನ ಸ್ಥಳೀಯರ ಸಹಾಯದಿಂದ ಸಂಪರ್ಕಿಸಿ ತಾಯಿಯನ್ನು ಮಗಳಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನಲ್ಲಿ ಬಂದ ವೃದ್ಧೆಗೆ ಇಲ್ಲಿನ ಭಾಷೆ ಗೊತ್ತಿಲ್ಲದೆ ಪರದಾಡುವಂತಾಗಿತ್ತು. ಇದನ್ನು ಗಮನಿಸಿದ ಹೊಯ್ಸಳ ಸಿಬ್ಬಂದಿ ಠಾಣೆಗೆ ಕರೆದುಕೊಂಡು ಹೋಗಿ ತಾಯಿ ಮಗಳನ್ನು ಹೊಂದು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.