ದೇಶದಲ್ಲಿ ಯುವ ಹಾಗೂ ಸಮರ್ಥ ಸೇನಾ ಶಕ್ತಿಯನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಸೇನಾ ಮುಖ್ಯಸ್ಥರು ಮಾಡಿದ ಪಗ್ನಿಪಥ ಯೋಜನೆಯನ್ನು ಅಗ್ನಿಕುಂಡವನ್ನಾಗಿ ಮಾಡುವ ಕೆಲಸಕ್ಕೆ ಯುವಕರನ್ನು ಪ್ರೇರೇಪಿಸುವ ಕಾರ್ಯಕ್ಕೆ ವಿರೋಧ ಪಕ್ಷದ ನೇತಾರರು ಮುಂದಾಗುತ್ತಿರುವುದು ವಿಷಾದನೀಯ ಎಂದು ರಾಜ್ಯ ಬಿಜೆಪಿ ವಕ್ತಾರ ಎಂಬಿ ಜಿರಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಎಂಬಿ ಜಿರಲಿ, ವಿಶ್ವದ ಅತ್ಯಂತ ಶಕ್ತಿಶಾಲಿ ಸೇನಾ ಹೊಸ ವ್ಯವಸ್ಥೆಯನ್ನು ದೇಶದ ರಕ್ಷಣಾ ಮಂತ್ರಿಗಳಾದ ರಾಜನಾಥ್‍ಸಿಂಗ್ ಪರಿಚಯ ಮಾಡಿದ್ದರೆ. ದೇಶನ ನೂತನ ಸೈನಿಕ ವ್ಯವಸ್ಥೆ ಅಗ್ನಿಪಥ ಯೋಜನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ವಿರೋಧ ಪಕ್ಷದವರು ಮಾತನಾಡುತ್ತಿದ್ದಾರೆ. ಪಗ್ನಿ ಪಥವನ್ನು ಅಗ್ನಿಕುಂಡವನ್ನಾಗಿ ಮಾಡುವ ಕೆಲಸಕ್ಕೆ ಯುವಕರನ್ನು ಪ್ರೇರೇಪಿಸುವ ಕಾರ್ಯಕ್ಕೆ ವಿರೋಧ ಪಕ್ಷದ ನೇತಾರರು ಮುಂದಾಗುತ್ತಿರುವುದು ವಿಷಾದನೀಯ. ಕಾರ್ಗಿಲ್ ಯುದ್ಧದ ನಂತರ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಸೇರಿ ಚಿಂತನೆ ನಡೆಸಿದ್ದಾರೆ.
ಅದರ ಪರಿಣಾಮವಾಗಿ ದೇಸದಲ್ಲಿ ಸೇನಾ ನೇಮಕಾತಿ ವಿಚರದಲ್ಲಿ ಆಮೂಲಾಘ್ರ ಬದಲಾವಣೆ ಆಗಬೇಕೆಂಬುದು ಉದ್ದೇಶವಾಗಿತ್ತು. ಹಾಗಾಗಿ ವಿದೇಶದ ಸೇನಾ ವ್ಯವಸ್ಥೆಗಳನ್ನೂ ಕೂಡ ಅಧ್ಯೆಯನ ಮಾಡಿ ಈ ಅಗ್ನಿಪಥ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅದರಲ್ಲಿ 17ರಿಂದ 23ವರ್ಷಗಳ ವರೆಗಿನ ಮಾಟ್ರಿಕ್ ಮುಗಿಸಿದ ವ್ಯಕ್ತಿಗಳು ಇದರಲ್ಲಿ ಸೇರಿಕೊಳ್ಳಬಹುದು. ಆಫೀಸರ್‍ಗಳ ಕೈಯ್ಯಲ್ಲಿ ಒಂದು ಹಂತದ ಜವಾನ್ ಹುದ್ದೆಗಳಲ್ಲಿ ಈ ನೇಮಕಾತಿ ಪಡೆ ನಿರ್ಮಾಣವಾಗುತ್ತದೆ. ದೇಶದ ಮುಂದೆ ಯುವ ಹಾಗೂ ಸಮರ್ಥ ಸೇನೆಯನ್ನು ನಿರ್ಮಾಣ ಮಾಡಬೇಕೆಂದು ಈ ಚಿಂತನೆಯನ್ನು ಮಾಡಿದೆ.
ಇದು ಪ್ರಧಾನಿ ನರೇಂದ್ರ ಮೋದಿರವರ ಯೋಜನೆಯಲ್ಲ. ಇದು ದೇಶದ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಕೂಲಂಕುಶ ಅಧ್ಯೆಯನ ನಡೆಸಿ ಅಗ್ನಿಪಥವನ್ನು ರೂಪಿಸಲಾಗಿದೆ ಎಂದರು.