ಕೇಂದ್ರ ಸರ್ಕಾರದ ಸೇನಾ ನೇಮಕಾತಿಯ ಹೊಸ ನಿಯಮ ಅಗ್ನಿಪಥ್ ಯೋಜನೆ ಜಾರಿಗೆ ವಿರೋಧಿಸಿ ದೇಶಾಧ್ಯಂತ ಪ್ರತಿಭಟನೆ ನಡೆಯುತ್ತಿದೆ. ಅದೇ ರೀತಿ ಗೋಕಾಕ್‍ನಲ್ಲಿಯೂ ಕೂಡ ನೂರಾರು ಯುವಕರು ಬೃಹತ್ ಪ್ರತಿಭಟನೆ ನಡೆಸಿದರು.
ಹೌದು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಅಗ್ನಿಪಥ್ ಯೋಜನೆ ಯುವ ಸಮೂಹದ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿ ಗೋಕಾಕ್‍ನ ಬಸವೇಶ್ವರ ವೃತ್ತದಲ್ಲಿ ದೇಶಪ್ರೇಮಿ ಯುವಕರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾನಿರತ ಯುವಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆ ಕೂಗಿದರು.
ನಾಗರಾಜ್ ಯಲ್ಲಪ್ಪ ನಾವಿ ಎಂಬ ಯುವಕ ಮಾತನಾಡಿ ಈಗಾಗಲೇ ನಾವು ರನ್ನಿಂಗ್, ದೈಹಿಕ ಪರೀಕ್ಷೆ ಹಾಗೂ ಮೆಡಿಕಲ್ ಪರೀಕ್ಷೆಯೂ ಆಗಿದೆ. 2020 ಫೆಬ್ರವರಿಯಲ್ಲಿ ಆಗಿದೆ. ಈಗ 19 ತಿಂಗಳು ಆಗಿದೆ. ಜುಲೈ 29, ಆಗಸ್ಟ್ 29, ಜನವರಿ 29 ಡೇಟ್ ಕೊಟ್ಟಿದ್ದರು. ಎಂದಾದ್ರೂ ಒಂದು ದಿನ ಲಿಖಿತ ಪರೀಕ್ಷೆ ಬರೆಯುತ್ತೇವೆ ಎಂದು ಕನಸು ಕಂಡಿದ್ದೇವು.ನಾನು ಸೇನೆ ಸೇರಬೇಕು ಎಂದು ಕನಿಷ್ಠ ಅಂದ್ರೂ 70-80 ಸಾವಿರ ಖರ್ಚು ಮಾಡಿದ್ದೇನೆ.
ನಮ್ಮ ಅವ್ವ ಬಾಂಡೆ ತಿಕ್ಕಿ ಹೊಟ್ಟೆ ತುಂಬಿಸುತ್ತಾಳೆ. ಇಲ್ಲಿ ಇರುವವರು ಯಾರೂ ರಾಜಕಾರಣಿಗಳು, ದೊಡ್ಡವರ ಯಾವ ಮಕ್ಕಳು ಇಲ್ಲ, ಎಲ್ಲಾ ಇರವರು ಬಡ ಮಕ್ಕಳೇ. ನಾಲ್ಕು ವರ್ಷ ಸೈನಿಕರಾಗಿ ಸೇವೆ ಸಲ್ಲಿಸೋದರಿಂದ ಏನೂ ಆಗೋದಿಲ್ಲ.
ಒಬ್ಬ ಫಿಟ್ ಆಗಬೇಕು ಎಂದರೆ ಐದು ವರ್ಷ ಬೇಕಾಗುತ್ತದೆ. ಹೀಗಾಗಿ ಮೊದಲು ಏನಿತ್ತು ನಿಯಮ ಅದನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಇನ್ನೊರ್ವ ಯುವಕ ಪ್ರಕಾಶ ಆಡಿನ್ ಮಾತನಾಡಿ ಬೆಳಿಗ್ಗೆ ಇದ್ದು ಓಡಿ ತ್ರಾಸ ಮಾಡಿಕೊಂಡು ಪಿಜಿಕಲ್, ಮೆಡಿಕಲ್ ಪಾಸ್ ಆಗಿದ್ದೇವೆ. ಯಾವ ರೊಕ್ಕದ ಸಂಬಂಧ ನಾವು ಸೇನೆಗೆ ಹೋಗುತ್ತಿಲ್ಲ, ದೇಶಸೇವೆಗಾಗಿ ಹೋಗುತ್ತಿದ್ದೇವೆ. ಮಿಲಿಟರಿ ಇದ್ದರೆ ನಾವು ನೀವು, ನಮ್ಮ ಹೆಂಡರು ಮಕ್ಕಳು. ಮಿಲಿಟರಿ ಅವರು ಇಲ್ಲದೇ ಇದ್ದರೆ ದೇಶ, ರಾಜಕೀಯ ತೆಗೆದುಕೊಂಡು ಏನು ಮಾಡೋಕೆ ಆಗುತ್ತದೆ