ಬೆಂಗಳೂರು: ವ್ಯಕ್ತಿ ಗೆಲ್ತಾನೆ ಎಂದರೆ ಸೋಲಿಸೋಕೆ ಕಾಯ್ತಾ ಇರ್ತಾರೆ. ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡುತ್ತಿದ್ದಾರೆ. ಅಂತವರು ನಮ್ಮನ್ನು ದ್ವೇಷಿಸಬಹುದು. ನಮ್ಮ ಪಕ್ಷದಲ್ಲಿ ಅಂತವರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಬೇರೆ ಪಕ್ಷದಲ್ಲಿ ಹೊಟ್ಟೆ ಉರಿಯವರು ಇದ್ದಾರೆ. ನಮ್ಮ ಶಾಸಕರು ಎಲ್ಲರೂ ನನ್ನ ಪರವೇ ಇದ್ದಾರೆ. ಮುಂದೆ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಮಹಿಳೆ, ಯುವಕರ ಸಮಸ್ಯೆ ಸಾಕಷ್ಟಿವೆ. ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಮತದಾರ ಪ್ರಭುಗಳು ಕಾಂಗ್ರೆಸ್ ಬೆಂಬಲಿಸುತ್ತಾರೆ. ಮುಂದೆ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂದರು.