ಬೆಳಗಾವಿಯ ಬಸವನಕುಡಚಿಯ ಹೊಲಗದ್ದೆಯಲ್ಲಿರುವ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.
ಪ್ರತಿ ವರ್ಷ ಮಳೆಯ ಆರ್ಭಟಕ್ಕೆ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ಲಾಸ್ಟಿಕ್ ಬಾಟಲಿಗಳು ನಾಲಾದಲ್ಲಿ ಜಲಾವೃತವಾಗಿವೆ. ಇಂಜೆಕ್ಷನ್ ಸೂಜಿ ಗದ್ದೆಯಲ್ಲಿ ಹರಡಿ ರೈತರ ಕಾಲಿಗೆ ಚುಚ್ಚುತ್ತಿದೆ. ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಹಲವು ಬಾರಿ ದೂರು ನೀಡಿದರೂ ಆಡಳಿತ ಗಮನಕ್ಕೆ ತಂದರೂ ಕೂಡ ಯಾವುದೇ ಕೆಲಸವಾಗಿಲ್ಲ.
ಹೀಗಾಗಿ ಕುಡಚಿ ಗ್ರಾಮದಲ್ಲಿ ಶಾಸಕ ಅನಿಲ್ ಬೆನಕೆ ಹಾಗೂ ಕಾಪೆರ್Çೀರೇಟರ್ ಬಸವರಾಜ್ ಮೊದಗೇಕರ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಗಾಲದಲ್ಲಿ ಬಳ್ಳಾರಿ ನಾಲಾ ಮೂಲಕ ನೀರು ಗದ್ದೆ, ಭತ್ತದ ಬೆಳೆ, ರಾಬಿ ಬೆಳೆ, ಜಾನುವಾರು ಮನೆಗಳಿಗೆ ನೀರು ನುಗ್ಗಿ ಹಾಳಾಗುತ್ತಿದೆ. ಈಗ ಸೇತುವೆ ನಿರ್ಮಾಣದಿಂದ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ.