ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ತಾಯಿಯ ಮಡಿಲಿನಿಂದ ಅಪಹರಣವಾಗಿದ್ದ 40 ದಿನದ ಮಗು ರಾತ್ರೋರಾತ್ರಿ ಆಸ್ಪತ್ರೆಯ ಆವರಣದಲ್ಲೇ ಪತ್ತೆಯಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಕಪ್ಪು ಬಣ್ಣದ ವ್ಯಕ್ತಿ ಮಡಿಲಿನಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಎಂದು ಮಗುವಿನ ತಾಯಿ ದೂರಿದ್ದಳು.
ವಿದ್ಯಾನಗರ ಠಾಣೆಯಲ್ಲೂ ಮಗು ಅಪಹರಣ ಪ್ರಕರಣ ದಾಖಲಾಗಿತ್ತು. ಮಗುವಿನ ಪತ್ತೆಗೆ ಮಹಾನಗರ ಪೊಲೀಸ್ ಆಯುಕ್ತರು ಮೂರು ವಿಶೇಷ ತಂಡಗಳನ್ನು ನಿಯೋಜಿಸಿದ್ದರು.
ಇದೆಲ್ಲ ಬೆಳವಣಿಗೆ ಕಂಡು ಅಪಹರಣಕಾರರು ಮಗುವನ್ನು ಮರಳಿ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರಬಹುದು. ಇದರಲ್ಲಿ ಮಗುವಿನ ತಾಯಿಯ ಕೈವಾಡವು ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.