ವಿಧಾನಪರಿಷತ್ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಉಲ್ಲಂಘನೆ ಕೇಸ್‍ನಡಿ ಐದು ಸೀಜ್‍ಗಳಾಗಿವೆ. ಇದು ಬಿಟ್ಟು ಎರಡು ಮೇಜರ್ ದೂರು ಬಂದಿವೆ, ಕೆಲವು ಸಣ್ಣಪುಟ್ಟ ದೂರುಗಳನ್ನು ನಾವು ಇತ್ಯರ್ಥ ಮಾಡಿದ್ದೇವೆ ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ಅವರು ಬಾಗಲಕೋಟೆಯಿಂದ ಓರ್ವ ವ್ಯಕ್ತಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಭಾಷ ಕೋಟೆ ಆಡಿಯೋ ಕ್ಲಿಪ್ ಕಳಿಸಿದ್ದಾರೆ. ಆ ಕುರಿತು ಬಾಗಲಕೋಟೆ ಎಸ್‍ಪಿಗೆ ತಿಳಿಸಿದ್ದು, ಅವರು ತನಿಖೆ ನಡೆಸಿ, ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಬಸವರಾಜ ಪಥ ಎಂಬ ಪುಸ್ತಕವನ್ನು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಪ್ರಕಟಿಸಿತ್ತು. ಈ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಭನ, ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಆರೋಪ ಹಿನ್ನೆಲೆ ದೂರು ಬಂದಿದೆ. ಹೀಗಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದೇವೆ ಎಂದರು.