ಮಹಾರಾಷ್ಟ್ರ -ಕರ್ನಾಟಕ ಗಡಿ ವಿವಾದಕ್ಕೆ ಸಂಬoಧಿಸಿದoತೆ ಮಹಾರಾಷ್ಟ್ರ ಸರ್ಕಾರದಿಂದ ನೇಮಿಸಿದ ತಜ್ಞರ ಸಮಿತಿಯ ಸಭೆ ನಡೆಯಿತು.
ಬುಧವಾರ ಸಂಜೆ ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಸಭಾಸದಸ್ಯರಾದ ರಾಮ್ ಆಪ್ಟೆ, ರಾಜಾಭಾವು ಪಾಟೀಲ, ದಿನೇಶ್ ಓವುಳಕರ, ಸುಜಾತಾ ಸೌನೀಕ್, ಶಿವಾಜೀರಾವ್ ಜಾಧವ, ಸಂತೋಷ ಕಾಕಡೆ ಇನ್ನುಳಿದವರು ಉಪಸ್ಥಿತರಿದ್ಧರು. ಇಂದಿನ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜುಲೈ ೯ ರಂದು ಮುಂದಿನ ಸಭೆ ನಡೆಯಲಿದೆ.
ಸಭೆಯ ಮುನ್ನ ಎಲ್ಲ ಸಾಕ್ಷಿದಾರರ ಪ್ರತಿಜ್ಞಾಪತ್ರವನ್ನು ಅಂತಿಮಗೊಳಿಸಲಾಗುವುದು. ಉಭಯ ರಾಜ್ಯದ ವರಿಷ್ಠ ನ್ಯಾಯಾವಾದಿಗಳನ್ನು ಶೀಘ್ರದಲ್ಲೇ ನೇಮಿಸುವಂತೆ ದೆಹಲಿಯ ಮುಖ್ಯ ನ್ಯಾಯಾವಾದಿ ಹರೀಶ್ ಸಾಳವೆ ಅವರೊಂದಿಗೆ ಚರ್ಚೆ ನಡೆಸಲಾಯಿತು. ನಕ್ಷೆ ತಯಾರಿಸುವ ಕಾರ್ಯವನ್ನು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಈ ವಿಷಯಕ್ಕೆ ಸಂಬAಧಿಸಿದAತೆ ಮುಂದಿನ ಸಭೆಯನ್ನು ದೇಶದ ರಾಜಧಾನಿ ದೆಹಲಿಯಲ್ಲಿ ನಡೆಸಲಾಗುವುದು. ಸಭೆಯಲ್ಲಿ ಕೆಲಕಾಲ ಶಾಸಕ ರೋಹಿತ್ ಪವಾರ್ ಕೂಡ ಉಪಸ್ಥಿತರಿದ್ಧರು.