Breaking News

ಕಳಪೆ ಬೀಜ ಖರೀದಿಸಿ ಮೋಸ ಹೋದ ರೈತ

Spread the love

ಹಾವೇರಿ: ಕಳಪೆ ಬೀಜ ಖರೀದಿಸಿ ಮೋಸ ಹೋದ ರೈತರಿಬ್ಬರು 9 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ನಕಲಿ ಬೀಜ ವಿತರಣೆಗೆ ಕಂಗಾಲಾಗಿರುವ ರೈತರ ಸ್ಥಿತಿ ಈಗ ಶೋಚನೀಯವಾಗಿದೆ.

ರೂಟರ್ ಮೂಲಕ ರೈತ ಹತ್ತಿಗಿಡಗಳನ್ನು ನಾಶಪಡಿಸಿದ್ದು, ಈ ಮೂಲಕ ಲಕ್ಷಾಂತರ ರೂ.

ನಷ್ಟ ಅನುಭವಿಸಿದ್ದಾರೆ. ಹಾವೇರಿ ತಾಲೂಕಿನ ಗುತ್ತಲ,ಹಾವನೂರು ಗ್ರಾಮದಲ್ಲಿ 9 ಎಕರೆ ಪ್ರದೇಶದಲ್ಲಿ ಇಬ್ಬರು ರೈತರು ಹತ್ತಿ ಬೀಜವನ್ನು ಬಿತ್ತನೆ ಮಾಡಿದ್ದರು. ಇದೀಗ ಗ್ರಾಮದ ಬಸವರಾಜ್​, ಪರಮೇಶ್​ ಎಂಬ ರೈತರು ಬೆಳೆಯನ್ನು ನಾಶಪಡಿಸಿದ್ದಾರೆ.

ಸಾವಿರಾರು ರೂಪಾಯಿ ಹಣ ಕೊಟ್ಟು ಹತ್ತಿ ಬೀಜ ತಂದಿದ್ದ ರೈತರು, ಬೀಜ ನೆಟ್ಟಿದ್ದರು, ಗಿಡಗಳೇನೋ ಉತ್ತಮವಾಗಿಯೇ ಬೆಳೆದಿದ್ದು, ಇನ್ನೇನು ಫಸಲು ಬರೆಬೇಕು ಎನ್ನುವಷ್ಟರಲ್ಲಿ ಅವಧಿ ಮೀರಿದರೂ ಫಸಲು ಬಾರದ ಹಿನ್ನಲೆಯಲ್ಲಿ ರೈತರು ಮನನೊಂದು ಗಿಡಗಳನ್ನೇ ನಾಶಪಡಿಸಲು ಮುಂದಾಗಿದ್ದಾರೆ.

ಲಕ್ಷಾಂತರ ರೂಪಾಯಿ ಲಾಭ ಕೊಡಬೇಕಿದ್ದ ಬೆಳೆ, ಬಿತ್ತನೆ ಬೀಜದಿಂದ ಈ ರೈತರು ಕೈ ಸುಟ್ಟುಕೊಂಡಿದ್ದಾರೆ. ಇದೀಗ ನಕಲಿ ಬೀಜ ವಿತರಣೆ ಮಾಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ರೈತರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಬುಧವಾರವೂ ಜಿಲ್ಲೆಯಎಲ್ಲ ತಾಲ್ಲೂಕುಗಳ ಶಾಲೆಗಳಿಗೆರಜೆ ಘೋಷಣೆ: ಜಿಲ್ಲಾಧಿಕಾರಿ

Spread the love ಬುಧವಾರವೂ ಜಿಲ್ಲೆಯಎಲ್ಲ ತಾಲ್ಲೂಕುಗಳ ಶಾಲೆಗಳಿಗೆರಜೆ ಘೋಷಣೆ ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿಮಳೆ ಸುರಿಯುತ್ತಿದ್ದು ಜಿಲ್ಲೆಯ ಜನಜೀವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ