Breaking News

ಸತ್ತ ಗಂಡ ಹಾವಿನ ರೂಪದಲ್ಲಿ ಮನೆಗೆ ಬಂದನೇ. ಬಾಗಲಕೋಟೆಯಲ್ಲಿ ಹಾವಿನ ಜತೆ 4 ದಿನ ವಾಸವಿದ್ದ ಅಜ್ಜಿ!

Spread the love

ಬಾಗಲಕೋಟೆ: ಹಾವು ಅಂದ್ರೆ ಸಾಕು ಎದ್ನೋ-ಬಿದ್ನೋ ಎಂದು ಓಡುವ ಜನರೇ ಹೆಚ್ಚು. ಇನ್ನು ಮನೆಯೊಳಗೇ ಬುಸ್​ ಬುಸ್​ ಅಂದ್ರೆ ಜೀವ ಬಾಯಿಗೆ ಬಂದಂತೆ ಆಗುತ್ತೆ. ಆದರೆ ಇಲ್ಲೊಬ್ಬ ಅಜ್ಜಿ, ಮನೆಗೆ ನುಗ್ಗಿದ ಹಾವಿನ ಜತೆಯಲ್ಲೇ 4 ದಿನ ವಾಸವಿದ್ದಾಳೆ.

ಅಷ್ಟೇ ಅಲ್ಲ, ಸತ್ತು ಹೋದ ಗಂಡನೇ ಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ನಂಬಿ ಚಾಪೆ ಮೇಲೆಯೇ ಹಾವನ್ನು ಮಲಗಿಸಿದ್ದಾಳೆ!

ಹೌದು ಇಂತಹ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಸಾರವ್ವ ಮೌನೇಶ್ ಕಂಬಾರ ಎಂಬಾಕೆಯ ಗಂಡ ಮೋನೇಶ್ ಮೃತಪಟ್ಟು ಹಲವು ವರ್ಷ ಕಳೆದಿದೆ. ಕಳೆದ ವಾರ ಈಕೆಯ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಹಾವನ್ನು ಹೊರಗೆ ಹಾಕಲು ಎಷ್ಟೇ ಪ್ರಯತ್ನಿಸಿದರೂ ಹಾವು ಮಾತ್ರ ಜಾಗಬಿಟ್ಟು ಕದಲಲಿಲ್ಲವಂತೆ. ಹಾವನ್ನು ಕಂಡು ಅಜ್ಜಿಯೇನೂ ಆತಂಕಗೊಂಡಿಲ್ಲ. ತನ್ನ ಗಂಡನೇ ಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ಭಾವಿಸಿ ಆಕೆಯು ಸುಮ್ಮನಾಗಿದ್ದಾಳೆ. ಆ ಹಾವು 4 ದಿನ ಆದರೂ ಅದೇ ಮನೆಯಲ್ಲಿತ್ತು.

ಅಜ್ಜಿ ಮನೆಯಲ್ಲಿ ಹಾವು ಇರುವ ವಿಚಾರ ತಿಳಿದು ಸುತ್ತಮುತ್ತಲ ನಿವಾಸಿಗಳು ಆಸ್ಚರ್ಯದಿಂದ ಬಂದು ನೋಡಿದ್ದಾರೆ. ಆಹಾರ ಇಲ್ಲದೆ ನಿತ್ರಾಣಗೊಂಡಂತೆ ಹಾವು ಕಂಡಿದೆ. ಈ ಹಾವನ್ನು ಹೊರಗೆ ಹೋಗಲು ಬಿಡಿ ಎಂದು ಜನ ಹೇಳಿದರೂ ಅಜ್ಜಿ ಕೇಳಿಲ್ಲ. ಹಾವಿಗೆ ಯಾರೂ ತೊಂದರೆ ಕೊಡಬೇಡಿ, ಅದನ್ನು ಹಿಡಿಯಬೇಡಿ. ನನ್ನ ಗಂಡನೇ ಹಾವಿನ ರೂಪದಲ್ಲಿ ಬಂದಿದ್ದಾನೆ. ಮೊದಲ ದಿನ ಹಾವು ಹೊರ ಹೋಗುತ್ತೆ ಎಂದು ನಾನು ಕಾದೆ. ಅದು ಹೋಗಲಿಲ್ಲ. ಚಾಪೆ ಬಳಿಯೇ ಇತ್ತು. ನಾನು ಕಾದುಕಾದು ಸಾಕಾಗಿ ಮಲಗಿಬಿಟ್ಟೆ. ಹಾವು ಕೂಡ ಸ್ವಲ್ಪ ದೂರಲ್ಲೇ ಮಲಗಿತ್ತು. ಬೆಳಗ್ಗೆ ಎದ್ದಾಗ ಚಾಪೆ ಪಕ್ಕ ಬಂತು. ನನಗೇನೂ ಮಾಡಿಲ್ಲ ಅದು. ಇಲ್ಲಿಯೇ ಇದೆ 4 ದಿನದಿಂದ ಎಂದು ಅಜ್ಜಿ ಹೇಳಿದ್ದಾಳೆ. ಈ ಮಾತು ಕೇಳಿ ಸ್ಥಳೀಯರೂ ಶಾಕ್​ ಆಗಿದ್ದಾರೆ. 4 ದಿನ ಚಾಪೆ ಮೇಲೆಯೇ ಇದ್ದ ಹಾವು ಇದೀಗ ಕಾಣಿಸುತ್ತಿಲ್ಲ. ಹಾವು ಏನಾಯ್ತು? ಸತ್ತು ಹೋಯ್ತಾ? ಇಲ್ಲವೇ ಆ ಮನೆಯಿಂದ ಕೊನೆಗೂ ಹೊರ ಹೋಯ್ತಾ? ಯಾವುದೂ ಗೊತ್ತಾಗಿಲ್ಲ.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ