ಬೇಲೂರ್ ಪಾಯೆ ಧಾರವಾಡದದಿಂದ ನಿನ್ನೆ ಬೆಳಗಾವಿ ನಗರದಕ್ಕೆ ತಲುಪಿತು. ಈ ವೇಳೆ ದಿಂಡಿ ಕಾರ್ಯಕ್ರಮಕ್ಕೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.
ನಿನ್ನೆ ಬುಧವಾರ ದಿನಾಂ 1ರಂದು ಬೆಳಗಾವಿಯಲ್ಲಿ ದಿಂಡಿ ಆಗಮಿಸಿತು. ಈ ವೇಳೆ ನ್ಯಯವಾದಿಗಳಾದ ಸದಾಶಿವ ಹಿರೇಮಠರವರ ಕುಟುಂಬದವರು ತಮ್ಮ ನಿವಾಸದಲ್ಲಿ ದಿಂಡಿಯನ್ನು ಸ್ವಾಗತ ಮಾಡಿಕೊಂಡರು. ಈ ವೇಳೆ ಭಜನೆ, ಕೀರ್ತನೆ, ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಭಕ್ತರಿಗೆ ಮಹಾಪ್ರಸಾದವನ್ನು ವಿತರಣೆ ಮಾಡಲಾಯಿತು.
ಈ ವೇಳೆ ಕೀರ್ತನಕಾರರಾದ ದೇವಪ್ಪಾ ವಾಲೀಕರಾ ಕೀರ್ತನೆಯನ್ನು ನಡೆಸಿದರು. ಈ ವೇಳೆ ಗಾಯಕ್‍ವಾಡ, ಹವಾಲ್ದಾರ್, ಮದವಾಲಿ, ಕರಿಯಪ್ಪ ರಾಜ್‍ಗುರವ್, ಗಿರೀಶ್ ಬಾಳೇಕುಂದ್ರಿ, ಭರತ್ ಅನಗೋಳ್, ಆನಂದ ವಿಜಯಪುರೆ, ಗಿರೀಶ್ ಹೆಬ್ಬಳ್ಳಿ, ಕಿರಣ್ ತುಬಕಿ, ರಮೇಶ ದೇಶಪಾಂಡೆ ಕುರಿತಂತೆ ಇನ್ನೂ ಹಲವರು ಉಪಸ್ಥಿತರಿದ್ದರು.