ನನ್ನ ಚುನಾವಣೆ ಸೇರಿದಂತೆ ಇತರೆ ಚುನಾವಣೆಯ ಸಂಧರ್ಭದಲ್ಲಿ ಅರುಣ ಶಹಾಪೂರ ಅವರು ದೂರ ಉಳಿದಿದ್ದರೂ ಎಂದು ವಿಜಯಪುರದ ಸಂಸದ ರಮೇಶ ಜಿಗಜಿನಗಿಯವರು ಸಹಜವಾಗಿಯೇ ಅಸಮಾಧಾನ ಹೊರಹಾಕಿದರು.
ಅವರು ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್.ಎಸ್.ಎಸ್ ಹಿನ್ನಲೆ ಉಳ್ಳವರು ಪಕ್ಷಕ್ಕೆ ದುಡಿಯೋದು ಸ್ವಲ್ಪ ಕಡಿಮೆನೆ.ಅರುಣ ಶಹಾಪೂರಯವರು ಸಂಘ ಪರಿವಾರದಿಂದ ಬಂದವರು ಈ ಹಿನ್ನಲೆಯಲ್ಲಿ ಪಕ್ಷದಿಂದ ಅವರು ದೂರ ಉಳಿಯುತ್ತಾರೆ..ಪಕ್ಷದಿಂದ ದೂರ ಉಳಿದಿದ್ದೆ ವಿಷಯವನ್ನು ಹೋರತುಪಡಿಸಿದರೆ ಅವರು ವಿಧಾನಪರಿಷತ ಸದಸ್ಯರಾಗಿ ಶಿಕ್ಷಕರ ಪರ ಒಳ್ಳೆಯ ಕೆಲಸ ಮಾಡಿದ್ದಾರೆ..ಅರುಣ ಶಹಾಪೂರ ಹಾಗೂ ಹಣಮಂತ ನಿರಾಣಿಯವರ ಗೆಲವು ನಿಶ್ಚಿತ ಎಂದರು..
ನಾನೇನೂ ಸಂಘ ಪರಿವಾರದಿಂದ ಬಂದಿಲ್ಲ.ನಾವು ಜನತಾದಳ ಪರಿವಾರದಿಂದ ಬಂದವನು.ಕಾಂಗ್ರೆಸ್ ಪಕ್ಕಕ್ಕೂ ಆಹ್ವಾನ ಇತ್ತು ಆದರೆ ಬಿಜೆಪಿಗೆ ಬಂದಿದ್ದೇನೆ..ಬಾಬಾಸಾಹೇಬ ಅಂಬೇಡ್ಕರರನ್ನು ಹಾಳು ಮಾಡಿದ್ದೆ ಕಾಂಗ್ರೆಸ್ ಪಕ್ಷ.ಬಾಬಾಸಾಹೇಬರು ತೀರಿಕೊಂಡಾಗ ಆರು ಅಡಿ ಜಾಗ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಂಸದ ರಮೇಶ ಜಿಗಜಿನಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿ.ಪ ಸದಸ್ಯ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ!ರಾಜೇಶ ನೇರ್ಲಿ,ಸತೀಶ ಅಪ್ಪಾಜಿಗೋಳ,ಸಂಜಯ ಪಾಟೀಲ,ಅಪ್ಪಾಸಾಹೇಬ ಚೌಗಲಾ,ಪ್ರಕಾಶ ಪಾಟೀಲ, ಬಾಳಾಸಾಹೇಬ ರೇಂದಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು….