ಖಾನಾಪುರ ತಾಲೂಕಿನ ಚಿಕ್ಕ ಮುನವಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೆ ದಲಿತ ಕುಟುಂಬಗಳಿಗೆ ನಿಷೇಧಿಸಲಾಗಿತ್ತು. ಇದೀಗ ಈ ದಲಿತ ಕುಟುಂಬಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ವಾದ) ಜಿಲ್ಲಾ ಘಟಕದ ವತಿಯಿಂದ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಹೌದು ಚಿಕ್ಕಮುನವಳ್ಳಿ ಗ್ರಾಮದಲ್ಲಿ ಇತ್ತಿಚಿಗೆ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮವಿತ್ತು. ಈ ವೇಳೆ ದಲಿತರಿಗೆ ದೇವಸ್ಥಾನಗದ ಒಳಗೆ ಪ್ರವೇಶ ಇಲ್ಲ ಎಂದು ಕಮೀಟಿ ಅವರು ಹೇಳಿದ್ದರು. ಈ ವಿಚಾರ ಇಡೀ ರಾಜ್ಯದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಈ ಕುಟುಂಬಗಳಿಗೆ ಒಂದು ತಿಂಗಳಕ್ಕೆ ಆಗುವಷ್ಟು 25 ಕೆಜಿ ಅಕ್ಕಿ, 10 ಕೆಜಿ ಗೋಧಿ ಹಿಟ್ಟು, ಐದು ಕೆಜಿ ಬೇಳೆ 5 ಕೆಜಿ ಸಕ್ಕರೆ, 3 ಎಣ್ಣೆ, ಒಂದು ಕೆಜಿ ಚಹಾಪುಡಿ, 1 ಕೆಜಿ ಕಾರದಪುಡಿಯನ್ನು ವಿತರಿಸಲಾಯಿತು.
ಈ ವೇಳೆ ಮುಖಂಡರಾದ ಬಸವರಾಜ್ ರಾಯವ್ವಗೋಳ, ಸಿದ್ರಾಯಿ ಮೇತ್ರಿ, ರವಿ ಬಸ್ತವಾಡಕರ್, ಸಂಯೋಷ ಕಾಂಬಳೆ, ಶಂಕರ್ ಕಾಂಬಳೆ, ವಿನಾಯಕ್ ಕೋಲಕಾರ್, ಮಹಾಂತೇಶ ಹಾದಿಮನಿ, ಪರಸು ಹಲಸಿ, ಸಂತೋಷ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.