ಬಿ.ವೈ.ವಿಜಯೇಂದ್ರಗೆ ಒಳ್ಳೆಯ ಭವಿಷ್ಯವಿದೆ. ಮುಂಬರುವ ದಿನಗಳಲ್ಲಿ ಒಳ್ಳೆಯ ನಾಯಕನಾಗಿ ಹೊರ ಹೊಮ್ಮುತ್ತಾನೆ. ಯಡಿಯೂರಪ್ಪನವರು, ಸಂಘ ಪರಿವಾರ, ಪಕ್ಷದ ಹಿರಿಯರ ಆಶೀರ್ವಾದ ಅವರ ಮೇಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೇಂದ್ರಗೆ ಎಂಎಲ್‍ಸಿ ಟಿಕೆಟ್ ತಪ್ಪಿದ ವಿಚಾರಕ್ಕೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಳಗಾವಿಯ ನಗರ ಬಿಜೆಪಿ ಕಚೇರಿಯಲ್ಲಿ ಉತ್ತರಿಸಿದ ಸಚಿವ ಮುರುಗೇಶ್ ನಿರಾಣಿ ರಾಜ್ಯದ ಉಪಾಧ್ಯಕ್ಷನಾಗಿ ವಿಜಯೇಂದ್ರ ಸಧ್ಯ ಕೆಲಸ ಮಾಡುತ್ತಿದ್ದಾನೆ. ಯುವಕನಾಗಿ ಇರೋದರಿಂದ ಇಡೀ ರಾಜ್ಯದ ತುಂಬಾ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದು. ಈಗ ಹಿರಿಯರಿಗೆ ಟಿಕೆಟ್ ಕೊಟ್ಟಿದ್ದಾರೆ. ರಾಜ್ಯದ ಕೋರ್ ಕಮೀಟಿ ಸಭೆ ಕಳಿಸಿರುವ ಹೆಸರುಗಳನ್ನೇ ಹೈಕಮಾಂಡ್ ಫೈನಲ್ ಮಾಡಿದ್ದಾರೆ. ಇಲ್ಲಿಂದ ಶಿಫಾರಸ್ಸು ಮಾಡಿದ ಹೆಸರುಗಳನ್ನೇ ಅಂತಿಮಗೊಳಿಸಲಾಗಿದೆ.
ವಿಜಯೇಂದ್ರ ಹೆಸರನ್ನು ಕಳಿಸಲಾಗಿತ್ತು. 20 ಹೆಸರುಗಳನ್ನು ಕಳಿಸಲಾಗಿತ್ತು. ಇರೋದು 4 ಸೀಟ್ ಮಾತ್ರ ಇದ್ದವು. ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಕೊಟ್ಟಿದ್ದಾರೆ. ವಿಜಯೇಂದ್ರಗೆ ಮುಂದೆ ಒಳ್ಳೆಯ ಭವಿಷ್ಯ ಬರುತ್ತದೆ.
ಮುಂದೆ ಒಳ್ಳೆಯ ಸಮಯವಿದೆ. ನಮ್ಮ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ತಲೆ ಬಾಗಲೇಬೇಕು. ಅದನ್ನು ಪ್ರಶ್ನೆ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಒಂದು ವರ್ಷ ಮಂತ್ರಿಯನ್ನೇ ಮಾಡಿರಲಿಲ್ಲ. ಆಗ ನಾನು ಏನಾದ್ರೂ ಪ್ರಶ್ನೆ ಮಾಡಿದ್ನಾ ಎಂದು ಸಮರ್ಥಿಸಿಕೊಂಡರು.