Breaking News

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 854 ಹುದ್ದೆಗಳಿಗೆ ನೇರ ನೇಮಕಾತಿ

Spread the love

ಬೆಂಗಳೂರು : ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಲ್ಯಾಣ ಕರ್ನಾಟಕ ಹಾಗೂ ಉಳಿದ ಮೂಲ ವೃಂದದ ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್‌, ಜೂನಿಯರ್ ಹೆಲ್ತ್‌ ಅಸಿಸ್ಟಂಟ್ ಹಾಗೂ ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್‌ ಹುದ್ದೆಗಳು ಸೇರಿದಂತೆ ಒಟ್ಟು 854 ಹುದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸಲು ಮುಂದಾಗಿದೆ.

ಈ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ. ಒಟ್ಟು 854 ಸ್ಥಾನಗಳಿಗೆ ಸರ್ಕಾರವು ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿ ಅಂತಿಮಗೊಳಿಸಿ, ಅಧಿಸೂಚನೆ ಪ್ರಕಟಿಸಿದೆ. ನೇರ ನೇಮಕಾತಿಗಾಗಿ ವಿಶೇಷ ಆಯ್ಕೆ ಸಮಿತಿ, ವಯಸ್ಸು ಹಾಗೂ ಶೈಕ್ಷಣಿಕ ಅರ್ಹತೆ ನಿಗದಿ, ಅರ್ಜಿ ಸಲ್ಲಿಕೆ, ಶುಲ್ಕ, ನೇಮಕಾತಿ ವಿಧಾನ ಹಾಗೂ ಪ್ರಕ್ರಿಯೆಗಳು, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಿಕೆ ಹಾಗೂ ಅಭ್ಯರ್ಥಿಗಳ ನೇಮಕಕ್ಕೆ ಪಾಲಿಸಬೇಕಾದ ನಿಯಮಗಳನ್ನು ರೂಪಿಸಿದ್ದು, ಈ ಅಧಿಸೂಚನೆಯಲ್ಲಿ ತಿಳಿಸಿದೆ.

ಹುದ್ದೆವಾರು ಶೈಕ್ಷಣಿಕ ಅರ್ಹತೆಗಳು
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್‌ : ಕಲ್ಯಾಣ ಕರ್ನಾಟಕದ 54, ಉಳಿದ ಮೂಲ ವೃಂದ 150 ಹುದ್ದೆಗಳು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಕರ್ನಾಟಕ ಔದ್ಯೋಗಿಕ ಶಿಕ್ಷಣ ಮಂಡಳಿಯಿಂದ ಎರಡು ವರ್ಷಗಳ ಡಿಪ್ಲೊಮ ಪೂರೈಸಿರಬೇಕು. ಅಥವಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿ ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಿಂದ ಸಂಬಂಧಿಸಿದ ವಿಷಯದಲ್ಲಿ 2 ವರ್ಷ ಡಿಪ್ಲೊಮ ಪಡೆದಿರಬೇಕು.

ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್‌ : ಉಳಿಕೆ ಮೂಲ ವೃಂದದ 400, ಹೈದೆರಾಬಾದ್ ಕರ್ನಾಟಕದ 93 ಹುದ್ದೆಗಳಿವೆ. ಈ ಹುದ್ದೆಗೆ ಅರ್ಜಿ ಹಾಕಲು SSLC ನಂತರ ಫಾರ್ಮಸಿ ಡಿಪ್ಲೊಮ ಪಾಸ್‌ ಮಾಡಿರಬೇಕು. ಹಾಗೂ ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೊಂದಾವಣೆ ಮಾಡಿರಬೇಕು. ಈ ಎರಡು ಹುದ್ದೆಗಳಿಗೆ ಆಯ್ಕೆಯಾದವರು ರೂ.27,650-52650 ವರೆಗೆ ವೇತನ ಶ್ರೇಣಿ ಪಡೆಯಬಹುದು.

ಜೂನಿಯರ್ ಹೆಲ್ತ್‌ ಅಸಿಸ್ಟಂಟ್ : 111 ಕಲ್ಯಾಣ ಕರ್ನಾಟಕ ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. ಈ ಹುದ್ದೆಗೆ SSLC ಪಾಸಾಗಿರಬೇಕು. ನಂತರ ಎಎನ್‌ಎಂ ಕೋರ್ಸ್‌ ಮಾಡಿರಬೇಕು. ರಾಜ್ಯ ನರ್ಸಿಂಗ್ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು. ಈ ಹುದ್ದೆಗೆ ವೇತನ ಶ್ರೇಣಿ Rs.23,500-47,650 ವರೆಗೆ ಇದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ