ಕೋಲಾರ: ಕೋಲಾರ ಜಿಲ್ಲೆಯಲ್ಲಿನ ಬಹುತೇಕ ಭಾರತ್ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ತೀವ್ರವಾಗುತ್ತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ ˌ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪೆಟ್ರೋಲ್ ಬಂಕ್‌ಗಳ ಮಾಲೀಕರು ಕಳೆದೊಂದು ವಾರದಿಂದ ಭಾರತ್ ಪೆಟ್ರೋಲ್ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದ್ದು ಕಳೆದೆರಡು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಸಂಪೂರ್ಣ ಖಾಲಿ ಯಾಗಿದೆ.
ಆದರೆ ಈ ಕೊರತೆ ಯಾಕೆ ಆಗುತ್ತಿದೆಯೆಂಬುದೂ ಸಹ ನಮಗೇ ತಿಳಿದಿಲ್ಲ ಎಂದರು.
ಇನ್ನು ನಾವು ಹಣ ಕಟ್ಟಿದರೂ ಕೂಡಾ ಬಂಕ್‌ಗಳಿಗೆ ಡಿಸೇಲ್, ಪೆಟ್ರೋಲ್ ಸರಬರಾಜಾಗಿಲ್ಲ. ವಾಹನ ಸವಾರರು ನಮಗೆ ಶಾಪ ಹಾಕುತ್ತಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ˌ
ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಇಂತಹ ದುಸ್ಥಿತಿ ಇದ್ದು, ಎಲ್ಲೆಡೆ ನೋ ಸ್ಟಾಕ್ ನೋ ಸ್ಟಾಕ್ ಬೋರ್ಡ್ ಗಳನ್ನ ಅಳವಡಿಸಲಾಗಿದೆ.