Breaking News

ಪಬ್ಜಿ ಆಡಬೇಡ ಎಂದು ತಂದೆ-ಮಗನ ಮಧ್ಯೆ ಜಗಳ, ಇಬ್ಬರ ಜಗಳದಲ್ಲಿ ಪ್ರಾಣ ಕಳೆದುಕೊಂಡ ತಾಯಿ

Spread the love

ಚಿಕ್ಕಮಗಳೂರು: ಜಿಲ್ಲೆಯ ಹಾಗಲಖಾನ್ ಎಸ್ಟೇಟ್ನಲ್ಲಿ ಭೀಕರ ದುರ್ಘಟನೆಯೊಂದು ಸಂಭವಿಸಿದೆ.

ಮಗನ ಪಬ್ಜಿ ಹುಚ್ಚಿಗೆ ತಾಯಿ ಬಲಿಯಾಗಿದ್ದಾರೆ. ಮೈಮುನಾ(40) ಕೊಲೆಯಾದ ಮಹಿಳೆ. ಪಬ್ಜಿ ಆಡದಂತೆ ಮಗನ ಜೊತೆ ತಂದೆ ಇಮ್ತಿಯಾಜ್ ಜಗಳವಾಡುತ್ತಿದ್ದರು. ಈ ವೇಳೆ ನಿನ್ನ ಸಾಯಿಸುತ್ತೇನೆಂದು ಅಪ್ಪ ಮಗನಿಗೆ ಕೋವಿ ಹಿಡಿದಿದ್ದ. ಕೋಪದಲ್ಲಿ ಗುಂಡು ಹಾಕಿಸಿದರೆ ಮಗನ ಪ್ರಾಣ ಹೋಗುತ್ತೆ ಎಂದು ತಾಯಿ ಮೈಮುನಾ ಅಡ್ಡ ಬಂದಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಮ್ತಿಯಾಜ್ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆಗೈದಿದ್ದಾರೆ. ಆರೋಪಿ ಇಮ್ತಿಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿ ಮೇಲೆ ಲಾರಿ ಹಾಯ್ದು ವ್ಯಕ್ತಿ ಸ್ಥಳದಲ್ಲಿ ಸಾವು
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಟ್ರಕ್ ಟರ್ಮಿನಲ್ ಬಳಿ ಅಪರಿಚಿತ ವ್ಯಕ್ತಿ ಮೇಲೆ ಲಾರಿ ಹಾಯ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆರಳಿಗೆ ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ತಮಿಳುನಾಡು ಮೂಲದ ಲಾರಿಯೊಂದು ಹತ್ತಿದ ಪರಿಣಾಮ ಸ್ಥಳದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಡ್ರಾಪ್‌ ಕೇಳೋ ನೆಪದಲ್ಲಿ ದರೋಡೆ
ಡ್ರಾಪ್ ಕೊಡೋಕೆ ಗಾಡಿ ನಿಲ್ಲಿಸಿದವನ ಮೇಲೆ ಅಟ್ಯಾಕ್ ಮಾಡಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಹೊರಮಾವು ಬಳಿ, ವಿಜಯಾ ಬ್ಯಾಂಕ್ ಕಾಲೊನಿ ಎಕ್ಸ್ಟೆನ್ಶನ್ ಬಳಿ‌ ನಡೆದಿದೆ. ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ಬೈಕ್ ಕಸಿದು ಖದೀಮರು ಪರಾರಿಯಾಗಿದ್ದಾರೆ. ಮೇ 18 ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೈಕ್‌ಗೆ ಪೆಟ್ರೋಲ್ ತುಂಬಿಸಲು ಸಹಾಯ ಬೇಕು ಎಂದು ಬೈಕ್ ಗೆ ಅಡ್ಡ ಹಾಕಿದ್ದ ದರೋಡೆಕೋರರು ಬಳಿಕ ಬೈಕ್ ನಿಲ್ಲಿಸುತ್ತಿದ್ದಂತೆ ಚಾಕು ತೆಗೆದು ಎರಡ್ಮೂರು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ‌ಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತರುಣ್ ಅಗರ್ವಾಲ್ ಹಲ್ಲೆಗೊಳಗಾಗಿರುವ ವ್ಯಕ್ತಿ. ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಕೆಲಸ ಮಾಡ್ತಿರುವ ತರುಣ್ ಬಳಿ‌ ಇದ್ದ ಎರಡು ಮೊಬೈಲ್ ಹಾಗೂ‌ ಹೊಂಡಾ ಆಯಕ್ಟಿವಾ ಕಸಿದು ಆರೋಪಿಗಳು ಪರಾರಿಯಾಗಿದ್ದಾರೆ. ಅದು ಸಾಲದು ಅಂತ ಏರಿಯಾದ ಮತ್ತೊಂದು ರಸ್ತೆಯಲ್ಲೂ ಬೈಕ್ ಎಗರಿಸಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ