Breaking News

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಣದಲ್ಲಿ ಕೋಟ್ಯಾಧೀಶರು

Spread the love

ಬೆಳಗಾವಿ: ಇದೇ ಮೊದಲ ಬಾರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ನಾಯಕ ಪ್ರಕಾಶ ಹುಕ್ಕೇರಿ ಕೋಟ್ಯಾಧಿ‍ಪತಿ. ಅವರ ಪತ್ನಿ ನೀಲಾಂಬಿಕಾ ಅವರೂ ಕೋಟಿ ಒಡತಿ.

ಪ್ರಕಾಶ ಹುಕ್ಕೇರಿ ಹೆಸರಿನಲ್ಲಿ ₹ 3.27 ಕೋಟಿ ಮೌಲ್ಯದ ಚರಾಸ್ತಿ ಇದೆ. ಅವರ ಪತ್ನಿ ಹೆಸರಿನಲ್ಲಿ 2.56 ಕೋಟಿ ಆಸ್ತಿ ಇದೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 2.42 ಕೋಟಿ ಚರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ನೀಡಿದ್ದಾರೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 10.78 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ₹ 97.61 ಲಕ್ಷ ಮೌಲ್ಯದ ವಾಹನಗಳಿವೆ. ಪತ್ನಿ ಹೆಸರಿನಲ್ಲಿ ₹ 61.35 ಲಕ್ಷ ಮೌಲ್ಯದ ವಾಹನಗಳಿವೆ ಎಂದು ತಿಳಿಸಿದ್ದಾರೆ.

₹ 37.88 ಲಕ್ಷ ಮೌಲ್ಯದ ಚಿನ್ನಾಭರಣವಿದೆ. ಪತ್ನಿ ಬಳಿ ₹ 31.77 ಲಕ್ಷ ಮೌಲ್ಯದ ಬಂಗಾರ ಮತ್ತು ಆಭರಣಗಳಿವೆ.

ಹುಕ್ಕೇರಿ ಅವರು ಬ್ಯಾಂಕ್‌ ಹಾಗೂ ಹಾಗೂ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ₹ 1.95 ಕೋಟಿ ಸಾಲ ಪಡೆದಿದ್ದಾರೆ. ಪತ್ನಿ ಹೆಸರಿನಲ್ಲಿ ₹ 50 ಲಕ್ಷ ಸಾಲವಿದೆ.

ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 61 ಲಕ್ಷ ಸಾಲವಿದೆ ಎಂದು ಮಾಹಿತಿ ನೀಡಿದ್ದಾರೆ.

ಸುನೀಲ ಸಂಕ:

ವಾಯುವ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಅವರು ₹ 1.05 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ತಮ್ಮ ಹೆಸರಿನಲ್ಲಿ ₹ .750 ಲಕ್‌ಷ ಮೌಲ್ಯದ ಕಾರು ಹೊಂದಿದ್ದಾರೆ. ಇದಕ್ಕೆ ಬ್ಯಾಂಕ್‌ನಲ್ಲಿ ₹ 3.52 ಲಕ್ಷ ಸಾಲ ಪಡೆದಿದ್ದಾರೆ.

ತಮ್ಮ ಹೆಸರಿನಲ್ಲಿ ₹ 63.80 ಲಕ್ಷ ಮೌಲ್ಯದ ಚರಾಸ್ತಿ ಇದೆ, ₹ 1.33 ಲಕ್ಷ ಬೆಲೆಬಾಳುವ ಬಂಗಾರದ ಆಭರಣಗಳಿವೆ. ₹ 2.60 ಲಕ್ಷ ಮೌಲ್ಯದ 4 ಕೆ.ಜಿ. ಬೆಳ್ಳಿ ಆಭರಣಗಳಿವೆ. ಪತ್ನಿ ಹೆಸರಿನಲ್ಲಿ ₹ 25 ಲಕ್ಷ ಮೌಲ್ಯದ ಚರಾಸ್ತಿ ಇದೆ. ಮಗಳ ಹೆಸರಿನಲ್ಲಿ ₹ 2.18 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ನೀಡಿರುವ ‍ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿದೆ.

Spread the loveಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ