Breaking News

ಕಮಿಷನ್‌ ಆರೋಪ: ಮಂತ್ರಿಯನ್ನೇ ವಜಾಗೊಳಿಸಿದ ಪಂಜಾಬ್‌ ಸಿಎಂ! ದೇಶವೇ ಬೆರಗು

Spread the love

ಪಂಜಾಬ್‌ನಲ್ಲಿ ಒಂದು ಅಪರೂಪದ ಬೆಳವಣಿಗೆಯಾಗಿದೆ. ಕಮಿಷನ್‌ ತಗೆದುಕೊಂಡ ಆರೋಪದ ಮೇಲೆ ಅಲ್ಲಿನ ಸಚಿವರೊಬ್ಬರನ್ನ ವಜಾಗೊಳಿಸಲಾಗಿದೆ. ವಿಶೇಷ ಅಂದ್ರೆ ಖುದ್ದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಈ ಕ್ರಮ ಕೈಗೊಂಡಿದ್ದು ಆರೋಪಿ ಮಂತ್ರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಂದ್ಹಾಗೆ ಈ ರೀತಿ ಕಮಿಷನ್‌ ಕೇಳಿ ತಮ್ಮ ಸರ್ಕಾರದಿಂದಲೇ ವಜಾಗೊಂಡವರು ಪಂಜಾಬ್‌ನ ಆರೋಗ್ಯ ಮಂತ್ರಿ ವಿಜಯ್‌ ಸಿಂಗ್ಲಾ. ಟೆಂಡರ್‌ನಲ್ಲಿ ಒಂದು ಪರ್ಸೆಂಟ್‌ ಕಮಿಷನ್‌ ಕೇಳಿದ್ರು ಅಂತ ಅಲ್ಲಿನ ಅಧಿಕಾರಿಗಳು ಹಿಂದಿನ ವಾರವಷ್ಟೇ ಸಿಎಂ ಭಗವಂತ್‌ಗೆ ದೂರು ನೀಡಿದ್ರು. ಇದರನ್ವಯ ಆರೋಪದ ಬಗ್ಗೆ ಗುಪ್ತವಾಗಿ ತನಿಖೆ ಮಾಡೋಕೆ ಆದೇಶ ನೀಡಲಾಗಿತ್ತು.

ಇದರಲ್ಲಿ ಆರೋಪಿ ಮಂತ್ರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರೋದಕ್ಕೆ ಸಾಕ್ಷಿ ಸಿಕ್ಕಿತ್ತು. ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಮನ್‌, ತಮ್ಮ ಸಂಪುಟದ ಸಚಿವನನ್ನೇ ಕೆಲಸದಿಂದ ಡಿಸ್ಮಿಸ್‌ ಮಾಡಿದ್ದಾರೆ. ಈ ಬಗ್ಗೆ ಜನತೆಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಸಂಪುಟದ ಇತರ ಸದಸ್ಯರಿಗೂ ವಾರ್ನಿಂಗ್‌ ಕೊಟ್ಟಿದ್ದು ಎಚ್ಚರ ತಪ್ಪಿದ್ರೆ ತಮಗೂ ಅದೇ ಗತಿ ಅಂತ ಖಡನ್‌ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಭಗವಂತ್‌ ಮನ್‌ ʻಜನರು ನಮ್ಮ ಮೇಲೆ ಮೇಲೆ ನಂಬಿಕೆ ಇಟ್ಟುಕೊಂಡು ಅಧಿಕಾರ ಕೊಟ್ಟಿದ್ದಾರೆ. ನಾವು ಕೂಡ ಭ್ರಷ್ಟಾಚಾರ ಮುಕ್ತ ಸಿದ್ದಾಂತದ ಮೇಲೆಯೇ ನಿಂತಿದ್ದೀವಿ. ಭಾರತ ಮಾತೆಯ ಮಗನಾಗಿ ಅರವಿಂದ್‌ ಕೇಜ್ರಿವಾಲ್‌ ಇದ್ದಾರೆ. ಸೈನಿಕನಂತೆ ನಾನು ಇದ್ದೀನಿ. ಭ್ರಷ್ಟಾಚಾರದ ವಿರುದ್ದ ಹೋರಾಡ್ತೀವಿ.

ಅದೂ ಒಂದು ಪರ್ಸೆಂಟ್‌ ಇದ್ರೂ ನಾವು ಸಹಿಸಲ್ಲ ಅಂತ ಹೇಳಿದ್ದಾರೆ. ಇತ್ತ ಪಂಜಾಬ್‌ ಸಿಎಂರ ಈ ಕ್ರಮದ ಬಗ್ಗೆ ದೆಹಲಿ ಸಿಎಂ ಆಪ್‌ ವರಿಷ್ಠ ಅರವಿಂದ್ ಕೇಜ್ರಿವಾಲ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದು ನನ್ನ ಕಣ್ಣಲ್ಲಿ ನೀರು ತಂದಿದೆ. ಅಂದ್ರೆ ಆನಂದ ಬಾಷ್ಪ ಬಂದಿದೆ. ಇಡೀ ದೇಶಕ್ಕೆ ಇವತ್ತು ಹೆಮ್ಮೆಯಾಗ್ತಿದೆ ಅಂತ ಶ್ಲಾಘಿಸಿದ್ದಾರೆ. ಅಂದ್ಹಾಗೆ ಈ ಹಿಂದೆ 2015ರಲ್ಲಿ ಕೂಡ ಅರವಿಂದ್‌ ಕೇಜ್ರಿವಾಲ್‌ ಭ್ರಷ್ಟಾಚಾರ ಆರೋಪದಲ್ಲಿ ತಮ್ಮ ದಿಲ್ಲಿ ಸಂಪುಟ ಸಚಿವರನ್ನೇ ಕೆಲಸದಿಂದ ವಜಾಗೊಳಿಸಿದ್ರು. ನನ್ನ ಸಚಿವರು ಯಾರಾದ್ರೂ ಭ್ರಷ್ಟಾಚಾರ ಮಾಡಿದ್ರೆ ಅವರ ಮೇಲೆ ಸ್ಟಿಂಗ್ ಆಪರೇಶನ್ ಮಾಡಿ ಹಿಡಿದುಕೊಡಿ.. ನಾನೇ ವಜಾ ಮಾಡಿ ಜೈಲಿಗೆ ಕಳಿಸ್ತೀನಿ ಅಂದಿದ್ರು


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ