Breaking News

ಮೇ 25ಕ್ಕೆ ಭಾರತ್ ಬಂದ್​​: ಬಂದ್​​ಗೆ ಕರೆ !

Spread the love

ಅದೇ ವೇಳೆ ಚುನಾವಣಾ ಸಮಯದಲ್ಲಿ ಇವಿಎಂ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗೆ ಮೀಸಲಾತಿ ವಿಚಾರದ ವಿರುದ್ಧವೂ ಬಿಎಎಂಸಿಇಎಫ್ ಪ್ರತಿಭಟನೆ ನಡೆಸುತ್ತಿದೆ.ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (BAMCEF ) ಮೇ 25 ರಂದು ಭಾರತ್ ಬಂದ್‌ಗೆ ( Bharat Bandh ) ಕರೆ ನೀಡಿದೆ.

ಇತರೆ ಹಿಂದುಳಿದ ವರ್ಗಗಳ (OBC) ಜಾತಿ ಆಧಾರಿತ ಜನಗಣತಿಯನ್ನು ಕೇಂದ್ರ ಸರ್ಕಾರ ನಡೆಸದಿರುವುದನ್ನು ವಿರೋಧಿಸಿ ಫೆಡರೇಶನ್ ಕ್ರಮಕ್ಕೆ ಒತ್ತಾಯಿಸಿದೆ. ಅದೇ ವೇಳೆ ಚುನಾವಣಾ ಸಮಯದಲ್ಲಿ ಇವಿಎಂ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗೆ ಮೀಸಲಾತಿ ವಿಚಾರದ ವಿರುದ್ಧವೂ ಬಿಎಎಂಸಿಇಎಫ್ ಪ್ರತಿಭಟನೆ ನಡೆಸುತ್ತಿದೆ. ಬಂದ್‌ಗೆ ರಾಷ್ಟ್ರೀಯ ಪರಿವರ್ತನ ಮೋರ್ಚಾ, ಭಾರತ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳೊಂದಿಗೆ ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಚಾಲಕ ವಾಮನ್ ಮೇಶ್ರಮ್‌ನಿಂದ ಬೆಂಬಲ ವ್ಯಕ್ತವಾಗಿದೆ.

ಬೇಡಿಕೆಗಳೇನು?

ಚುನಾವಣೆಯಲ್ಲಿ ಇವಿಎಂ ಬಳಕೆ ಬೇಡ

ಜಾತಿ ಆಧಾರಿತ ಜನಗಣತಿ

ಖಾಸಗಿ ವಲಯದಲ್ಲಿ SC/ST/OBC ಮೀಸಲಾತಿ

ರೈತರಿಗೆ ಎಂಎಸ್​​ಪಿ ಖಾತರಿ

NRC/CAA/NPR ಅನುಷ್ಠಾನ ಬೇಡ

ಹಳೆಯ ಪಿಂಚಣಿ ಯೋಜನೆ ಪುನರಾರಂಭ

ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಗೆ ಪ್ರತ್ಯೇಕ ಎಲೆಕ್ಟೊರೇಟ್

ಪರಿಸರ ಸಂರಕ್ಷಣೆಯ ನೆಪದಲ್ಲಿ ಬುಡಕಟ್ಟು ಜನರನ್ನು ಸ್ಥಳಾಂತರಿಸಬಾರದು


Spread the love

About Laxminews 24x7

Check Also

ಹುದಲಿ ಗ್ರಾಮಕ್ಕೆ ಆಗಮಿಸಿ ಗಾಂಧೀಜಿ 7 ದಿನಗಳ ಕಾಲ ವಾಸ್ತವ್ಯ ಹೂಡಿದ ನೆನಪುಗಳನ್ನು ಸ್ಮರಿಸಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

Spread the love ನಮ್ಮ ಕ್ಷೇತ್ರದ ಹೆಮ್ಮೆ ಮಹಾತ್ಮಾ ಗಾಂಧೀ – ಗಂಗಾಧರರಾವ್ ಸ್ಮಾರಕ ಭವನಕ್ಕೆ ಇಂದು ಭೇಟಿ ನೀಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ