ಆರೋಗ್ಯವಂತ ವ್ಯಕ್ತಿಯ ತೂಕ, ವಯಸ್ಸು ಮತ್ತು ಎತ್ತರ ಹೇಗಿರಬೇಕು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ಎತ್ತರಕ್ಕೆ ಅನುಗುಣವಾಗಿ ತೂಕದ ಸಮತೋಲನವಿದ್ದರೆ ಉತ್ತಮ ಆರೋಗ್ಯದ ಮಾನದಂಡವಾಗಿದೆ. ಪ್ರತಿಯೊಬ್ಬರಿಗೂ ಅವರವರ ಎತ್ತರಕ್ಕೆ, ವಯಸ್ಸಿಗೆ ಇಂತಿಷ್ಟೆ ತೂಕ ಇರಬೇಕು ಅಂತ ಇದೆ.
ಇಷ್ಟು ವಯಸ್ಸಿಗೆ, ಇಷ್ಟು ಎತ್ತರಕ್ಕೆ, ಇಷ್ಟು ತೂಕ ಇರಬೇಕು ಅಂತ ವೈದ್ಯಕೀಯ ವಾಗಿ ಕೂಡ ಹೇಳಲಾಗಿದೆ. ಇದು ಸ್ವಾಸ್ಥ್ಯ ಆರೋಗ್ಯದ ಮಾನದಂಡ.
ವೈದ್ಯರು ಕೂಡ ಇದನ್ನೆ ಖಚಿತವಾಗಿ ಹೇಳುತ್ತಾರೆ. ವಯಸ್ಸಿಗೆ ಮತ್ತು ಎತ್ತರಕ್ಕೆ ಕನಿಷ್ಟ ಮತ್ತು ಗರಿಷ್ಠ ತೂಕವಿರದೆ ಹೆಚ್ಚು ಕಡಿಮೆ ಆಯಿತು ಅಂದ್ರೆ ಹಲವು ರೋಗಗಳು ಕಾಡುವುದು ನಿಶ್ಚಿತ. ಹಾಗಾದ್ರೆ ಎಷ್ಟು ವಯಸ್ಸಿಗೆ, ಎಷ್ಟು ಎತ್ತರಕ್ಕೆ, ಎಷ್ಟು ತೂಕ ಇರಬೇಕೆಂಬ ಮಾಹಿತಿ ಯನ್ನು ನಿಮಗೆ ಈಗ ಕೊಡುತ್ತೇವೆ. ಈ ಪರಿಜ್ಞಾನ ಇಲ್ಲದೆ ವಯಸ್ಸಿಗೆ ಮತ್ತು ಎತ್ತರಕ್ಕೆ ಇಂತಿಷ್ಟು ತೂಕ ಇರದಿದ್ದರೆ ಅನಾರೋಗ್ಯದ ಸಮಸ್ಯೆ ಎದುರಿಸುವುದು ಗ್ಯಾರಂಟಿ. ಈ ಕಾರಣದಿಂದ ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅನಿವಾರ್ಯ.
4 ಅಡಿ 10 ಇಂಚು ಎತ್ತರ- 41 ರಿಂದ 52 ಕೆ.ಜಿ.ತೂಕ
5 ಅಡಿ ಎತ್ತರ- 55.7 ಕೆ.ಜಿ. ತೂಕ
5 ಅಡಿ 4 ಇಂಚು ಎತ್ತರ- 49 ರಿಂದ 63 ಕೆ.ಜಿ. ತೂಕ
5 ಅಡಿ 10 ಇಂಚು ಎತ್ತರ- 56 ರಿಂದ 75 ಕೆ.ಜಿ. ತೂಕ
6 ಅಡಿ ಎತ್ತರ- 63 ರಿಂದ 80 ಕೆ.ಜಿ. ಒಳಗಿರಬೇಕು
ಆರೋಗ್ಯಕರ ತೂಕ : ಇದರರ್ಥ ನೀವು ವ್ಯಾಖ್ಯಾನಿಸಲಾದ ಅನುಪಾತದ ವ್ಯಾಪ್ತಿಯಲ್ಲಿರುತ್ತೀರಿ.
ಕಡಿಮೆ ತೂಕ : ನೀವು ಚಾರ್ಟ್‌ನಲ್ಲಿ ವ್ಯಾಖ್ಯಾನಿಸಿರುವ ಮಾನದಂಡಕ್ಕಿಂತ ಕೆಳಗಿರುವಿರಿ. ಅದರ ಕಾರಣ ಮತ್ತು ಪರಿಹಾರವನ್ನು ಕಂಡುಹಿಡಿಯಲು ನೀವು ವೃತ್ತಿಪರ ವೈದ್ಯಕೀಯ ಸಹಾಯವನ್ನು ಪಡೆಯಬೇಕು.
ಅಧಿಕ ತೂಕ : ನಿಮ್ಮ ತೂಕವು ನಿಮ್ಮ ಎತ್ತರಕ್ಕೆ ಮಾನದಂಡಕ್ಕಿಂತ ಹೆಚ್ಚಾಗಿರುತ್ತದೆ. ನೀವು ಹಲವಾರು ರೋಗಗಳ ಅಪಾಯದಲ್ಲಿದ್ದೀರಿ ಮತ್ತು ತೂಕ ನಷ್ಟಕ್ಕೆ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಇದು ಸೂಚಿಸುತ್ತದೆ.