ಹುಬ್ಬಳ್ಳಿ: ಹುಬ್ಬಳ್ಳಿಯ ಮೋಹನ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಮೋಹನ ಸಂಕೇಶ್ವರ ಅವರ ಧರ್ಮಪತ್ನಿ ಶ್ರೀಮತಿ ಲತಾ ಮೋಹನ ಸಂಕೇಶ್ವರ(59) ಸೋಮವಾರ ನಿಧನರಾದರು.
ಲತಾ ಮೋಹನ ಸಂಕೇಶ್ವರ ಅವರು ದೇಶಪಾಂಡೆ ನಗರದ ವಾಸವಿದ್ದರು. ಇವರಿಗೆ ಪತಿ, ಪುತ್ರ ಸಂತೋಷ ಸಂಕೇಶ್ವರ, ಪುತ್ರಿ ಸ್ನೇಹಾ ಗುರುರಾಜ ಕಡಿವಾಳ, ಸೊಸೆ ಶ್ವೇತಾ ಸಂತೋಷ ಸಂಕೇಶ್ವರ ಹಾಗೂ ಅಪಾರ ಬಂಧುಗಳು ಇದ್ದಾರೆ.
ಮಂಟೂರ ರಸ್ತೆಯ ಕಲಬುರ್ಗಿ ಮಠದ ರುದ್ರಭೂಮಿಯಲ್ಲಿ ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ: ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Laxmi News 24×7