ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ವಿಧಾನಸಭೆ ಚುನಾವಣೆ ತಯಾರಿಯಲ್ಲಿ ತೊಡಗಿದ್ದರೂ, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಲಾಗಿದೆ.
ಬಿಜೆಪಿ ಮಿಷನ್-150 ಗುರಿ ತಲುಪುವುದು ಕಷ್ಟ.
ಮುಖಂಡರ ವಿವಾದಾತ್ಮಕ ಹೇಳಿಕೆ, ನಾಯಕತ್ವ ಪ್ರಶ್ನಿಸುವ ರೀತಿಯ ಅನಿಸಿಕೆ, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕಸರತ್ತು, ವಲಸಿಗರ ಮೇಲೆ ಮೂಡದ ಪೂರ್ಣ ಪ್ರಮಾಣದ ವಿಶ್ವಾಸ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್‌ಐ ನೇಮಕ ಹಗರಣ, ಧಾರ್ಮಿಕ ಸೂಕ್ಷ್ಮ ವಿಚಾರದಲ್ಲಿ ಎದ್ದ ಗದ್ದಲ, ಬೆಲೆ ಏರಿಕೆ, ಸಚಿವರಲ್ಲಿನ ಗೊಂದಲ… ಹೀಗೆ ವಿವಿಧ ವಿಷಯಗಳು ಬಿಜೆಪಿಯ ವರ್ಚಸ್ಸಿಗೆ ಕುಂದುಂಟು ಮಾಡಿವೆ ಎನ್ನುವುದು ಆಂತರಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
Laxmi News 24×7