Breaking News

ಇಲ್ಲಿವರಗೂ ಬಂಧಿಸಿದ್ದ 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯ: ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ ಜೈಲು ಭಾಗ್ಯ ಫಿಕ್ಸ್​!

Spread the love

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿವರಗೆ 32 ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿತ್ತು.

32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯವಾಗಿದೆ. ಆರೋಪಿಗಳ ಪೈಕಿ ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ 32 ಜನರಿಗೂ ಇದೀಗ ಜೈಲು ಭಾಗ್ಯ ಫಿಕ್ಸ್​! ಆಗಿದೆ. ಎಲ್ಲರನ್ನು ಕಲಬುರಗಿ ಕೇಂದ್ರ ಕಾರಾಗೃಹಗೆ ಸಿಐಡಿ ಸಿಬ್ಬಂದಿ ಬಿಟ್ಟಿದ್ದು, ನಗರದ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿರೋ ಸಿಐಡಿ ಕಚೇರಿ, ಕಳೆದ ಒಂದು ತಿಂಗಳಿಂದ ಆರೋಪಿಗಳಿಂದ ತುಂಬಿ ಹೋಗಿತ್ತು. ತಿಂಗಳ ನಂತರ ಮೊದಲ ಬಾರಿಗೆ ಆರೋಪಿಗಳಿಲ್ಲದೆ ಸಿಐಡಿ ಕಚೇರಿ ಖಾಲಿಯಾಗಿದೆ. ಸದ್ಯ ಸಿಐಡಿ ಅಧಿಕಾರಿಗಳು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ.

ದಿವ್ಯಾ ಹಾಗರಗಿ ಮಾತು ಕೇಳಿ ಜೈಲು ಪಾಲಾದ ಶಿಕ್ಷಕಿರು

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಕಿಂಗ್​ಪಿನ್ ಕಾಶಿನಾಥ ಮತ್ತು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾತು ನಂಬಿ ಅಕ್ರಮಕ್ಕೆ ನೆರವಾಗಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಶಿಕ್ಷಕಿಯರು ಪ್ರಸ್ತುತ ಕಲಬುರ್ಗಿ ಜಿಲ್ಲಾ ಕಾರಾಗೃಹದಲ್ಲಿ ಪರದಾಡುತ್ತಿದ್ದಾರೆ. ಪಿಎಸ್‌ಐ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕಿಯರರಾಗಿ ಕೆಲಸ ಮಾಡಿದ್ದ ಸುಮಾ, ಸಿದ್ದಮ್ಮ, ಅರ್ಚನಾ, ಸುನಿತಾ ಅವರನ್ನು ಬಂಧಿಸಲಾಗಿದೆ. ತಿಂಗಳಿಗೆ ಐದರಿಂದ ಎಂಟು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದರು. ಸಿಬ್ಬಂದಿ ಮೂಲಕವೇ ಒಎಂಆರ್ ಶೀಟ್​ನಲ್ಲಿ ಕಾಶಿನಾಥ ಉತ್ತರ ತುಂಬಿಸಿದ್ದ. ಇವರ ಮಾತು ಕೇಳಿ ಅಕ್ರಮಕ್ಕೆ ನೆರವಾಗಿದ್ದ ಶಿಕ್ಷಕಕಿಯರು ಇದೀಗ ಜೈಲು ಪಾಲಾಗಿದ್ದಾರೆ.

ಅಕ್ರಮದಲ್ಲಿ ಸಿಕ್ಕು ಬಿದ್ದು ಜೈಲು ಸೇರಿದ ಕಾರಣಕ್ಕೆ ಒಬ್ಬ ಶಿಕ್ಷಕಿಯ ಮದುವೆಯೇ ಮುರಿದು ಬಿದ್ದಿದೆ. ನಿಶ್ಚಿತಾರ್ಥದ ನಂತರ ಜೈಲು ಸೇರಿದ ಕಾರಣ ವರ ಮದುವೆ ರದ್ದುಪಡಿಸಿದ್ದಾನೆ. ಗಂಡನಿಂದ ದೂರವಾಗಿ 13 ವರ್ಷದ ಮಗನೊಂದಿಗೆ ಜೀವಿಸುತ್ತಿದ್ದ ಇನ್ನೊಬ್ಬ ಶಿಕ್ಷಕಿ ಪರದಾಡುತ್ತಿದ್ದಾರೆ. ಬಂಧಿತರಾದವರಲ್ಲಿ ಬಹುತೇಕರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶಿಕ್ಷಕಿ ಸಿದ್ದಮ್ಮಗೆ ಜಾಮೀನು ಸಲ್ಲಿಸುವವರು ಯಾರೂ ಇಲ್ಲ. ಸ್ಕೂಲ್​ಗೆ ಹೋಗಿ ಸಂಜೆ ಬರ್ತಿನಿ ಎಂದು ಮಗನಿಗೆ ಹೇಳಿ ಬಂದ ಸಿದ್ದಮ್ಮ ಜೈಲು ಸೇರಿ ಒಂದು ತಿಂಗಳಾಗಿದೆ. ನಿತ್ಯವೂ ಮಗನ ನೆನೆದು ಜೈಲಿನಲ್ಲಿ ಶಿಕ್ಷಕಿ‌ ಕಣ್ಣೀರಿಡುತ್ತಿದ್ದಾರೆ. ಇವರಿಗೆ ಕಾನೂನು ನೆರವು ಒದಗಿಸಲು, ಜಾಮೀನು ಕೊಡಿಸಲೂ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ.


Spread the love

About Laxminews 24x7

Check Also

ಸಂಪುಟ ಪುನಾರಚನೆ ಆದರೆ, ಸಿದ್ದರಾಮಯ್ಯ ನಾಯಕತ್ವ ಅಬಾಧಿತ: ಕೆ.ಎನ್.ರಾಜಣ್ಣ

Spread the loveಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ಅಭಾದಿತ ಎಂದು ಮಾಜಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ