ಬಾಗಲಕೋಟೆ: ಚುನಾವಣೆಯಲ್ಲಿ ಗೆದ್ದು 6 ತಿಂಗಳಲ್ಲಿ ಹಿಂದೂ ರುದ್ರಭೂಮಿಯನ್ನು ಮುಸ್ಲಿಂ ಸಮೂದಾಯಕ್ಕೆ ಕೊಟ್ಟಿದ್ದಿರಾ. ಹಾಗಾದರೆ ಹಿಂದೂಗಳು ಸತ್ತರೇ, ಹೂಳಲು ನಿಮ್ಮ ಮನೆಗೆ ಬರಬೇಕಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಬಾದಾಮಿ ಪಟ್ಟಣದ ಹಿಂದೂ ಸಮಾಜ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಮುಸ್ಲಿಮರಿಗೆ ಹನ್ನೆರೆಡು ಎಕರೆ ಜೊತೆಗೆ, ನಮ್ಮದು ಮೂರು ಎಕರೆ ಸೇರಿಸಿ ಕೊಟ್ಟಿದ್ದೀರಿ. ಇದರಿಂದಾಗಿ ಬಾದಾಮಿ ಕ್ಷೇತ್ರದಲ್ಲಿ ಒಂದೂ ಹಿಂದೂಗಳ ರುದ್ರಭೂಮಿ ಇಲ್ಲದ್ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರೇ ಹಿಂದೂಗಳು ಜಾಗೃತರಾಗಿದ್ದಾರೆ. ಇದರಿಂದಾಗಿ ನೀವು ಮುಂದಿನ ಸಾರಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನಿಮ್ಮ ಠೇವಣಿ ಸಹ ಉಳಿಯೋದಿಲ್ಲ. ನಿಮ್ಮ ಜಾತಿ ಜನಾನೂ ಗೆಲ್ಲಸಲ್ಲ, ಯಾವ ಮತದಾರು ಏನೂ ಮಾಡಕಾಗಲ್ಲ. ಜೊತೆಗೆ ಹಿಂದೂ ಸಮಾಜದ ತಾಕತ್ ತೋರಿಸಬೇಕಿದೆ. ಹೀಗಾಗಿ ಬೇರೆ ಕ್ಷೇತ್ರವನ್ನು ಹುಡುಕಿ ಎಂದರು
Laxmi News 24×7