Breaking News

ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದಮಗ

Spread the love

ಚೆನ್ನೈ: ಮಗನೊಬ್ಬ ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.ಆರೋಪಿ ಮಗನನ್ನು ಎಸ್ ಹರ್ಷ ಬೋತ್ರಾ(24) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನ ಪೊಲೀಸರು ಬಂಧಿಸಿದ್ದಾರೆ. ಸುಭಾಶ್ ಚಂದ್ರ ಬೋತ್ರಾ ಮಗನಾಗಿರುವ ಹರ್ಷ ಆನ್‍ಲೈನ್ ವಹಿವಾಟಿನಲ್ಲಿ ಆಗಿರುವ 1.5 ಕೋಟಿ ನಷ್ಟವನ್ನು ಸರಿದೂಗಿಸಲು ಚಿನ್ನ ಕದ್ದಿದ್ದಾನೆ ಎಂದು ಹೇಳಿದ್ದಾನೆ.

ಆರಂಭದಲ್ಲಿ ಪೊಲೀಸರು ಹೊರಗಿನವರ ಕೈವಾಡ ಇರಬಹುದೆಂದು ಶಂಕಿಸಿದ್ದಾರೆ. ಆದರೆ ಈ ಸಂಬಂಧ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಜ್ಯುವೆಲ್ಲರಿ ಶಾಪ್ ಬಳಿ ಹರ್ಷಾ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಶಾಪ್ ಮಾಲಿಕನ ಮಗ ಹರ್ಷನನ್ನು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಆತನ ಬಳಿ 11.5 ಕೆ.ಜಿ ಚಿನ್ನ ಇರುವುದು ತಿಳಿದುಬಂತು. ವಿಚಾರಣೆಯ ವೇಳೆ ಆಗಿರುವ ನಷ್ಟವನ್ನು ಮರುಪಾವತಿಸಿದ ಬಳಿಕ ಹರ್ಷ ಎಲ್ಲಾ ಚಿನ್ನವನ್ನು ವಾಪಸ್ ಮಾಡುವ ಪ್ಲಾನ್ ಮಾಡಿರುವುದಾಗಿ ತಿಳಿಸಿದ್ದನು.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ