Breaking News

ಟೊಮೆಟೋ ದರ ಮತ್ತೆ ಏರಿಕೆ;

Spread the love

ಕುಂದಾಪುರ: ಕಳೆದ ವಾರ 40-45 ರೂ. ಇದ್ದ ಟೊಮೆಟೋ ದರ ಈಗ ಮತ್ತೆ ಏಕಾಏಕಿ ಭಾರೀ ಏರಿಕೆಯಾಗಿದೆ. ಕೆ.ಜಿ.ಗೆ 40 ರೂ. ಆಸುಪಾಸಿನಲ್ಲಿದ್ದ ದರ 70-80 ರೂ. ಆಗಿದೆ. ಕಾರ್ಯಕ್ರಮಗಳು ಹೆಚ್ಚಾಗಿದ್ದು, ಮಾರುಕಟ್ಟೆಗಳಿಗೆ ಬೇಡಿಕೆಯಷ್ಟು ಟೊಮೆಟೋ ಪೂರೈಕೆಯಾಗದೆ ದರ ಇನ್ನಷ್ಟು ಏರಿಕೆಯಾಗುವ ಸಂಭವವೂ ಇದೆ ಎನ್ನಲಾಗುತ್ತಿದೆ.

 

ಕಳೆದ ಡಿಸೆಂಬರ್‌ – ಜನವರಿಯಿಂದೀಚೆಗೆ ಇದು ಎರಡನೇ ಬಾರಿಗೆ ಟೊಮೆಟೋ ಬೆಲೆ ಈ ಪ್ರಮಾಣದಲ್ಲಿ ಏರಿದೆ. ಆಗಲೂ 80-90 ರೂ. ಆಸುಪಾಸಿನವರೆಗೆ ಹೆಚ್ಚಿತ್ತು. ಜೂ. 10 ವರೆಗೆ, ಅಂದರೆ ಮಳೆಗಾಲದ ವರೆಗೆ ದರ ಇದೇ ಸ್ಥಿತಿ ಇರಬಹುದು.

ಲಿಂಬೆಹುಳಿ ದುಬಾರಿ
ಬಿಸಿಲಿನ ಬೇಗೆ, ಸಮಾರಂಭಗಳು, ಪೂರೈಕೆ ಕೊರತೆಯಿಂದಾಗಿ ಲಿಂಬೆಹುಳಿಯ ಬೆಲೆಯೂ ಹೆಚ್ಚಿದೆ. ಸದ್ಯ ಒಂದು ಲಿಂಬೆ ಹುಳಿಯ ಬೆಲೆ 10-12 ರೂ. ಇದೆ. ಸ್ವಲ್ಪ ಸಮಯದ ಹಿಂದೆ 10 ರೂ.ಗೆ 4 ಲಿಂಬೆ ಸಿಗುತ್ತಿತ್ತು. ಆಗ ಒಂದು ಚೀಲ (1 ಸಾವಿರ ಲಿಂಬೆ)ಕ್ಕೆ 1,500 ರೂ. ಇದ್ದುದು ಈಗ 6-7 ಸಾವಿರ ರೂ. ಆಗಿದೆ.

ಈರುಳ್ಳಿ ಬೆಲೆ ಇಳಿಕೆ
ಬೀನ್ಸ್‌, ತೊಂಡೆ, ನುಗ್ಗೆ, ಬದನೆ, ಸೌತೆ ಸಹಿತ ಬಹುತೇಕ ಇತರ ತರಕಾರಿಗಳ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಈ ವಾರದಲ್ಲಿ ಈರುಳ್ಳಿ ಬೆಲೆ ಮಾತ್ರ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ. 30-35ರ ಆಸುಪಾಸಿನಲ್ಲಿದ್ದ ಈರುಳ್ಳಿ ದರ ಈಗ 20-25 ರೂ. ಆಸುಪಾಸಿನಲ್ಲಿದೆ.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ