ವಿಜಯಪುರ : ನಗರದಲ್ಲಿ ಅಜಾನ್ ವಿರುದ್ದ ಸುಪ್ರಭಾತ ಹಾಗೂ ಭಜನ್ ಅಭಿಯಾನ ಆರಂಭಗೊಂಡಿದೆ. ಸೋಮವಾರ ಸುರ್ಯೋದಯಕ್ಕೆ ಮುನ್ನವೇ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸುಪ್ರಭಾತ, ಭಜನಾ ಅಭಿಯಾನ ಅರಂಭಿಸಿದ್ದಾರೆ.
ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ವಿದ್ಯುತ್ ಚಾಲಿತ ವಾಧ್ಯ ಬಳಸಿ ಈ ಪರಿಸರದಲ್ಲಿರುವ ಮಸೀದಿಯಿಂದ ನಸುಕಿನಲ್ಲಿ ಕೇಳಿ ಬರುವ ಆಜಾನ್ ವಿರುದ್ದ ಭಜನ್ ಅಭಿಯಾನ ಆರಂಭಿಸಿದ್ದಾರೆ.
ಭೀಮು ಮಾಶ್ಯಾಳ, ಶಶಿ ಗಂಗನಹಳ್ಳಿ, ಈರಪ್ಪ ಹತ್ತಿ ನೇತೃತ್ವದಲ್ಲಿ ಭಜನ್ ಅಭಿಯಾನ ಆರಂಭಿಸಿರುವ ಯುವಕರು, ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಆಜಾನ್ ಗೆ ಬಳಕೆ ಮಾಡುವ ಧ್ವನಿವರ್ಧಕ ತೆರವು ಮಾಡುವ ವರೆಗೆ, ಧ್ವನಿವರ್ಧಕದ ಮೂಲಕ ಜೋರು ಸದ್ದಿನ ಅಜಾನ್ ಮಾಡಲು ಬಳಸುವ ಧ್ವನಿವರ್ಧಕ ನಿಲ್ಲಿಸೋವರೆಗೂ ನಮ್ಮ ಅಭಿಯಾನ ನಡೆಯುತ್ತದೆ ಎಂದು ಆಜಾನ್ ವಿರುದ್ಧ ಭಜನ್ ಅಭಿಯಾನ ಆರಂಭಿಸಿದ್ದಾರೆ.